ದೇಶದ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕವಾದ ರಿಯಾಲಿಟಿ ಶೋ ಬಿಗ್ ಬಾಸ್ ಇತ್ತೀಚೆಗೆ ಓಟಿಟಿ ಪ್ಲಾಟ್‌ಫಾರಂಗೆ ಕಾಲಿಟ್ಟಿದೆ. ತಾನು ಲೈವ್ ಆಗಿರುವುದನ್ನು ಘೋಷಿಸಿದ ಬಿಗ್ ಬಾಸ್ ಭಾರೀ ಸುದ್ದಿ ಮಾಡುತ್ತಿದೆ.
ಬಿಗ್ ಬಾಸ್‌ನ ಡಿಜಿಟಲ್ ಅವತರಣಿಕೆಗೆ 13 ಸೆಲೆಬ್ರಿಟಿಗಳು ಬಂದಿದ್ದಾರೆ. ಸಾಕಷ್ಟು ಡ್ರಾಮಾ, ದೋಸ್ತಿ ಹಾಗೂ ಇನ್ನಷ್ಟು ಮಸಾಲೆಗಳನ್ನು ತುಂಬಿಕೊಂಡಿರುವ ಬಿಗ್ ಬಾಸ್ ಕಾರ್ಯಕ್ರಮ ಇತ್ತೀಚೆಗೆ ಅಂತ್ಯಗೊಂಡಿದ್ದು, ದಿವ್ಯಾ ಅಗರ್ವಾಲ್ ಟ್ರೋಫಿ ಕೊಂಡು ಮನೆಗೆ ಹೋಗಿದ್ದಾರೆ.
ಪ್ರತಿ ವಾರದ ತನ್ನ ಸಂಭಾವನೆಯೊಂದಿಗೆ ಒಟ್ಟಾರೆ 25 ಲಕ್ಷ ರೂಪಾಯಿಗಳನ್ನು ದಿವ್ಯಾ ಮನೆಗೊಯ್ದಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ರೇವತಿ; ಮಗುವನ್ನು ಎತ್ತಿಕೊಂಡು ಮುದ್ದಾಡಿದ ನಿಖಿಲ್ ಕುಮಾರಸ್ವಾಮಿ
ಬಿಗ್ ಬಾಸ್‌ನ ಮತ್ತೊಬ್ಬ ಸ್ಫರ್ಧಿ ನೇಹಾ ಭಾಸಿನ್ ವಾರವೊಂದಕ್ಕೆ ಓಟಿಟಿ ಶೋನಲ್ಲಿ ಎರಡು ಲಕ್ಷ ರೂಪಾಯಿ ಪಡೆಯುತ್ತಿದ್ದರು ! ಮಿಕ್ಕಂತೆ ಪಂಜಾಬಿ ಗಾಯಕ ಮಿಲಿಂದ್ ಗಬಾ, ಅಕ್ಷರಾ ಸಿಂಗ್ ವಾರಕ್ಕೆ ತಲಾ 1.75 ಲಕ್ಷ ರೂಪಾಯಿ; ಕರಣ್ ನಾಥ್ 1.5 ಲಕ್ಷ ರೂಪಾಯಿ; ಮುಸ್ಕಾನ್ ಜಟ್ಟಾನಾ 1.5 ಲಕ್ಷ ರೂಪಾಯಿ; ರಾಕೇಶ್ ಬಾಪಟ್ 1.2 ಲಕ್ಷ ರೂಪಾಯಿ; ನಿಶಾಂತ್ ಭಟ್ 1.2 ಲಕ್ಷ ರೂ. ಹಾಗೂ ಪ್ರತೀಕ್ ತಲಾ ಒಂದು ಲಕ್ಷ ರೂಪಾಯಿ ಪಡೆಯುತ್ತಿದ್ದರು.
ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲು ವಾರವೊಂದಕ್ಕೆ 3.75 ಲಕ್ಷ ರೂಪಾಯಿ ಪಡೆಯುತ್ತಿದ್ದರು.
https://www.instagram.com/p/CSi5m6DqU6j/?utm_source=ig_embed&ig_rid=51f67ac1-df16-48ff-a510-8bd43ece764d
https://www.instagram.com/p/CSmxhy9AxxW/?utm_source=ig_embed&ig_rid=4d89fc33-df1c-44e2-ad56-a5cdb331694b
https://www.instagram.com/p/CTBxbqzjXVK/?utm_source=ig_embed&ig_rid=b32b56d7-1c53-4922-b0b1-fb05cb826053