alex Certify ಕಚೇರಿ ಕೆಲಸದಲ್ಲಿ ಹೊಸ ಮಾದರಿಯನ್ನು ತರಲು ಮುಂದಾದ ಟಿಸಿಎಸ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚೇರಿ ಕೆಲಸದಲ್ಲಿ ಹೊಸ ಮಾದರಿಯನ್ನು ತರಲು ಮುಂದಾದ ಟಿಸಿಎಸ್​​

ಭಾರತ ಸೇರಿದಂತೆ ವಿದೇಶಗಳಲ್ಲಿರುವ ಐಟಿ ಕಂಪನಿಗಳು ಹೈಬ್ರಿಡ್ ವರ್ಕ್​ ಮಾದರಿಯನ್ನು ಅನ್ವೇಷಣೆ ಮಾಡುತ್ತಿದ್ದು ಇದರ ಪ್ರಕಾರ ಉದ್ಯೋಗಿಗಳಿಗೆ ವಾರದಲ್ಲಿ ಕೆಲವು ದಿನ ಮನೆಯಲ್ಲಿ ಹಾಗೂ ಇನ್ನುಳಿದ ದಿನ ಕಚೇರಿಯಲ್ಲಿ ಕೆಲಸ ಮಾಡುವಂತೆ ಹೇಳಲಾಗ್ತಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಈ ಹಿಂದೆ 2021ರ ಅಂತ್ಯದೊಳಗೆ ಅಥವಾ 2022ರ ಆರಂಭದಲ್ಲಿ 70-80 ಪ್ರತಿಶತ ಕೆಲಸಗಾರರನ್ನು ಕಚೇರಿಗೆ ಕರೆಯೋದಾಗಿ ಘೋಷಣೆ ಮಾಡಿತ್ತು.

ಆದರೆ ಈಗ ಟಿಸಿಎಸ್​​ ಹೈಬ್ರಿಡ್​ ಕಲ್ಚರ್​ ವರ್ಕ್​ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ.
2025ರ ವೇಳೆಗೆ 25X5 ದೃಷ್ಟಿಕೋನದಲ್ಲಿ ಕೆಲಸ ಮಾಡಲು ಟಿಸಿಎಸ್​​ ಪ್ಲಾನ್​ ಮಾಡಿದೆ.

ಜಾಗತಿಕವಾಗಿ ಅರ್ಧ ಮಿಲಿಯನ್​ ಉದ್ಯೋಗಿಗಳನ್ನು ಹೊಂದಿರುವ ಟಿಸಿಎಸ್​ 25 ಪ್ರತಿಶತ ಸಿಬ್ಬಂದಿಯನ್ನು ಮಾತ್ರ ಕಚೇರಿಗೆ ಕರೆಸುವ ಪ್ಲಾನ್​ ಹೊಂದಿದೆ. ಪ್ರಾಜೆಕ್ಟ್​ ತಂಡಗಳಲ್ಲಿ ಕೇವಲ 25 ಪ್ರತಿಶತ ಉದ್ಯೋಗಿಗಳು ಸಹಕರಿಸಬಹುದಾಗಿದೆ.

ಕಂಪನಿಯ 2020ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಸಿಇಓ ರಾಜೇಶ್​ ಗೋಪಿನಾಥನ್​ ಈ ಪ್ಲಾನ್​ ಬಗ್ಗೆ ಮಾಹಿತಿ ನೀಡಿದ್ರು. ಇದೀಗ ಅನೇಕ ಕಡೆಗಳಲ್ಲಿ ರಾಜೇಶ್​ ಈ ಬಗ್ಗೆ ಮಾತನಾಡುತ್ತಿದ್ದಾರೆ.

ನಮ್ಮ ಗ್ರಾಹಕರು ಈ ಮಾದರಿಯಿಂದ ಖುಷಿಯಾಗಿದ್ದಾರೆ ಹಾಗೂ ಇತರರ ಕೈಯಲ್ಲಿ ನಿರ್ವಹಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಹೆಚ್ಚಿನ ಕೆಲಸವನ್ನು ತೆಗೆದುಕೊಳ್ಳಬೇಕೆಂದು ಬಯಸುತ್ತಾರೆ. ಗ್ರಾಹಕರ ಈ ಮಾತುಗಳು ನಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ಇದೇ ಧೈರ್ಯದಲ್ಲಿ ನಾವು ವಿಷನ್​ 25/5 ಹೊರತರಲು ಮುಂದಾಗಿದ್ದೇವೆ ಎಂದು ವಾರ್ಷಿಕ ಸಭೆಯಲ್ಲಿ ಟಿಸಿಎಸ್​ ಸಿಇಓ ರಾಜೇಶ್​ ಗೋಪಿನಾಥನ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...