ಪ್ರತಿಭಟನಾಕಾರನ ಮೇಲೆ ಹಲ್ಲೆ ನಡೆಸಿದ ಫೋಟೋಗ್ರಾಫರ್ ಅರೆಸ್ಟ್ 24-09-2021 11:30AM IST / No Comments / Posted In: Latest News, India, Live News ಗಾಯಗೊಂಡಿದ್ದ ಪ್ರತಿಭಟನಾಕಾರನ ಮೇಲೆ ಫೋಟೋಗ್ರಾಫರ್ ಹಲ್ಲೆ ನಡೆಸಿದ ಘಟನೆಯು ಆಸ್ಸಾಂನ ಸಿಪಾಝಾರ್ ಪ್ರದೇಶದಲ್ಲಿ ನಡೆದಿದೆ. ಫೋಟೋಗ್ರಾಫರ್ನನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೈಯಲ್ಲಿ ಕ್ಯಾಮರಾ ಹಿಡಿದಿದ್ದ ವ್ಯಕ್ತಿಯು ಪ್ರತಿಭಟನಾಕಾರನ ದೇಹದ ಮೇಲೆಯೇ ಹಾರಿದ್ದಾನೆ. ಆಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸುವ ವೇಳೆ ಈ ಘಟನೆ ನಡೆದಿದ್ದು ಪೊಲೀಸರ ಜೊತೆ ಗುಂಪೊಂದು ಸಂಘರ್ಷ ನಡೆಸಿದೆ. ಜಟಾಪಟಿಯಲ್ಲಿ ಇಬ್ಬರು ಮೃತಪಟ್ಟಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ ಕ್ಯಾಮರಾಮ್ಯಾನ್ ವ್ಯಕ್ತಿಯೊಬ್ಬನ ಎದೆಯ ಮೇಲೆ ಒದ್ದಿದ್ದಾನೆ. ಈ ಘಟನೆಯ ಬಳಿಕ ಆಸ್ಸಾಂ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ಹೊರಹಾಕಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ಸರ್ಕಾರದ ಪ್ರಚೋದನೆಯಿಂದಲೇ ಪೊಲೀಸರು ಈ ರೀತಿ ವರ್ತಿಸಿದ್ದಾರೆ ಎಂದು ಕುಟುಕಿದ್ದಾರೆ. ನಮ್ಮ ಸಹೋದರ ಹಾಗೂ ಸಹೋದರಿಯರ ಜೊತೆ ನಾವಿದ್ದೇವೆ. ಭಾರತದ ಯಾವುದೇ ಮಕ್ಕಳು ಈ ರೀತಿ ಶಿಕ್ಷೆ ಅನುಭವಿಸಲು ಸಾಧ್ಯವಿಲ್ಲ ಎಂದು ಟ್ವೀಟಾಯಿಸಿದ್ದಾರೆ. Currently in Sipajhar, taking stock of the ground situation.The cameraman who was seen attacking an injured man in a viral video has been arrested. As per wish of Hon. CM @himantabiswa I have asked CID to investigate the matter.Cameraman Bijoy Bonia is in @AssamCid 's custody. — DGP Assam (@DGPAssamPolice) September 23, 2021