ಆರು ವರ್ಷಗಳ ಮುನ್ನ ಅಮೆರಿಕದ ಕ್ರೆಡಿಟ್ ಕಾರ್ಡ್ ಪ್ರೊಸೆಸಿಂಗ್ ಕಂಪನಿ ’ಗ್ರ್ಯಾವಿಟಿ ಪೇಮೆಂಟ್ಸ್’ನ ಸಿಇಒ ತನ್ನ ವೇತನವನ್ನು ಶೇ.90ರಷ್ಟು ಕಡಿತ ಮಾಡುವುದಾಗಿ ಘೋಷಿಸಿದ್ದರು. ಆ ವೇಳೆ ಅವರನ್ನು ಹುಚ್ಚ ಎಂದೇ ಉದ್ಯಮ ಜಗತ್ತು ಭಾವಿಸಿತ್ತು. ಆದರೆ ಆರು ವರ್ಷಗಳ ತರುವಾಯ ಇದೇ ಏಪ್ರಿಲ್ 13ರಂದು ಅವರ ಕಂಪನಿಯ ವಾರ್ಷಿಕೋತ್ಸವದ ದಿನ ಅವರು ಯಾರೂ ಮಾಡಿರದ ಸಾಧನೆ ಮಾಡಿದ್ದಾರೆ.
ತಮ್ಮ ಉದ್ಯೋಗಿಗಳಿಗೆ ತಮ್ಮದೇ ವೇತನವನ್ನು ವಾರ್ಷಿಕವಾಗಿ ಹಂಚಿದ ಪರಿಣಾಮ ಅವರ ಕಂಪನಿಯು ಅಭೂತಪೂರ್ವ ಲಾಭದಲ್ಲಿದೆ. ಜತೆಗೆ ಉದ್ಯೋಗಿಗಳು ಕೂಡ ತಮ್ಮ ಜೀವನಗುಣಮಟ್ಟವನ್ನು ಹತ್ತು ಪಟ್ಟು ಹೆಚ್ಚಿಸಿಕೊಂಡು ಐಷಾರಾಮಿಯಾಗಿ ಬಾಳುತ್ತಿದ್ದಾರೆ.
ತಮ್ಮ 7.3 ಕೋಟಿ ರೂ. ವೇತನದ ಶೇ.90ರಷ್ಟು ಕಡಿತ ಮಾಡಿದ ಸಿಇಒ ಹೆಸರು ‘ ಡ್ಯಾನ್ ಪ್ರೈಸ್ ‘.
ಬಳಿಕ ಅವರು ಆ ಮೊತ್ತವನ್ನು ತಮ್ಮ ಕಂಪನಿಯ ಶ್ರೇಯಸ್ಸಿಗೆ ಶ್ರಮಿಸುತ್ತಿರುವ 100 ಉದ್ಯೋಗಿಗಳಿಗೆ ತಮ್ಮ ಕಡಿತದ ವೇತನವನ್ನು ವಾರ್ಷಿಕ 51 ಲಕ್ಷ ರೂ.ನಂತೆ ಹಂಚಿದ್ದರು.
BIG BREAKING: ಒಂದೇ ದಿನದಲ್ಲಿ ಮತ್ತೆ 31,382 ಜನರಲ್ಲಿ ಕೋವಿಡ್ ಪಾಸಿಟಿವ್; ಸಾವಿನ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ
ಆರು ವರ್ಷಗಳಾಗಿರುವ ಈಗ, ಡ್ಯಾನ್ ಅವರ ಕಂಪನಿಯ ಆದಾಯ ಮೂರು ಪಟ್ಟು ಹೆಚ್ಚಾಗಿದೆ. ಈಗಲೂ ಕೂಡ ರೈಸ್ ತಮ್ಮ ವೇತನವನ್ನು ಪೂರ್ಣವಾಗಿ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಸಾಕಷ್ಟು ಪ್ರಮಾಣವನ್ನು ಉದ್ಯೋಗಿಗಳಿಗೆ ಹಂಚುತ್ತಿದ್ದಾರೆ. ಅತಿಶ್ರೀಮಂತರ ಆಸ್ತಿ ದುಪ್ಪಟ್ಟು ಮಾಡಲೆಂದೇ ಆರ್ಥಿಕ ತಜ್ಞರು ತಮ್ಮದೇ ಆದ ಕಾಲ್ಪನಿಕ ಸಿದ್ಧಾಂತಗಳನ್ನು, ಸುಧಾರಣಾ ಕ್ರಮಗಳನ್ನು ಪ್ರತಿ ವರ್ಷ ಘೋಷಿಸುತ್ತಿರುತ್ತಾರೆ. ಆದರೆ , ತಮ್ಮ ಕಂಪನಿಯ ಉದ್ಯೋಗಿಗಳ ಮನಗೆಲ್ಲಲು ಏನು ಬೇಕೆಂಬುದನ್ನು ನಾವಾಗಿಯೇ ಮನಗಂಡರೆ ಕಂಪನಿಗೆ ನಷ್ಟವೇ ಇರುವುದಿಲ್ಲ ಎಂದು ಟ್ವೀಟ್‌ಗಳ ಮೂಲಕ ಡ್ಯಾನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭಾರತದ ಸಾಫ್ಟ್‌ವೇರ್, ಕಾರ್ಪೊರೇಟ್, ಎಂಎನ್‌ಸಿ ಕಂಪನಿಗಳು ಎಷ್ಟು ಮಂದಿ ಸಿಇಒಗಳು ಈ ಪ್ರಯೋಗಕ್ಕೆ ಸಿದ್ಧರಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಉದ್ಯೋಗಿಗಳು ಪ್ರಶ್ನೆ ಹಾಕಿದ್ದಾರೆ,