alex Certify ಹೆಣ್ಣಿಗೂ ಇದೆ ಪುರುಷರಂತೆ ಸಮಾನ ಹಕ್ಕು; ಆಫ್ಘನ್‌ ಬಾಲಕಿಯ ಖಡಕ್ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣಿಗೂ ಇದೆ ಪುರುಷರಂತೆ ಸಮಾನ ಹಕ್ಕು; ಆಫ್ಘನ್‌ ಬಾಲಕಿಯ ಖಡಕ್ ಮಾತು

ಅಲ್ಲಾಹುವಿನ ಕಣ್ಣಿನಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರಾಗಿದ್ದಾರೆ. ಹಾಗಾಗಿ ತಾಲಿಬಾನ್‌ ಮಹಿಳೆಯರನ್ನು ತಾರತಮ್ಯದಿಂದ ನೋಡಬಾರದು. ನಾನು ನವಯುಗದ ಪೀಳಿಗೆ, ಕೇವಲ ತಿಂದು, ಮಲಗಿ, ಮನೆಯಲ್ಲೇ ಉಳಿಯಲಾರೆ ಎಂದು ಆಫ್ಘಾನಿಸ್ತಾನದ ಈ ಶಾಲಾ ಬಾಲಕಿ ಖಡಕ್‌ ಭಾಷಣ ಮಾಡಿದ್ದಾಳೆ.

ಇದರ ವಿಡಿಯೊವನ್ನು ಅಫ್ಗಾನಿಸ್ತಾನದ ಪತ್ರಕರ್ತ ಬಿಲಾಲ್‌ ಸರ್ವಾರಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶಿಕ್ಷಣದ ಕೊರತೆಯಿಂದ ಅಫ್ಘಾನಿಸ್ತಾನವು ಜಗತ್ತಿನಲ್ಲೇ ಹಿಂದುಳಿಯಿತು. ದೇಶದ ಭವಿಷ್ಯವೇ ನಾಶವಾಗುತ್ತಿದೆ ಎಂದು ಬಾಲಕಿಯು ತಾಲಿಬಾನ್‌ ಉಗ್ರರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿರುವ ವಿಡಿಯೊಗೆ ಟ್ವೀಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IPL: ಕುತೂಹಲ ಮೂಡಿಸಿದ ಹೈವೋಲ್ಟೇಜ್ ಮ್ಯಾಚ್; ಕೊಹ್ಲಿ –ಧೋನಿ ಟೀಂ ಮುಖಾಮುಖಿ

ಕಡ್ಡಾಯವಾಗಿ ಆಫ್ಘನ್‌ ಮಹಿಳೆಯರಿಗೆ ಶಿಕ್ಷ ಣ ಸಿಗಲೇಬೇಕು. ಶಾಲೆಗಳಲ್ಲಿ ಬಾಲಕಿಯರು ಭಯ ಮುಕ್ತರಾಗಿ, ದೌರ್ಜನ್ಯ ಮುಕ್ತರಾಗಿ ಓದುವಂತಹ ವಾತಾವರಣ ನಮಗೆ ಬೇಕು ಎಂದು ಆಕೆ ಆಗ್ರಹಿಸಿದ್ದಾಳೆ. ಈ ಹುಡುಗಿಯು ವಿಶ್ವಸಂಸ್ಥೆಯಲ್ಲಿ ಮಾತನಾಡಿ, ತಾಲಿಬಾನಿಗಳ ನಿಜ ಮುಖವಾಡವನ್ನು ಬಯಲು ಮಾಡಬೇಕು ಎಂದು ಅನೇಕ ಟ್ವೀಟಿಗರು ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ಅಫ್ಘಾನಿಸ್ತಾನದಲ್ಲಿ ಅಧಿಪತ್ಯ ಸ್ಥಾಪಿಸಿರುವ ತಾಲಿಬಾನ್‌ ಉಗ್ರ ಸಂಘಟನೆಯಲ್ಲಿ ಪ್ರಧಾನಿ ಹಾಗೂ ಅಧ್ಯಕ್ಷರ ಹುದ್ದೆಗಳಿಗಾಗಿ ತೀವ್ರ ಸಂಘರ್ಷ ಉಂಟಾಗಿದೆ. ಆಂತರಿಕ ಕಿತ್ತಾಟದಿಂದ ಅರಾಜಕತೆ ತಾಂಡವವಾಡುತ್ತಿದೆ. ಇದಕ್ಕೆ ಪಾಕಿಸ್ತಾನ ಕೂಡ ಕುಮ್ಮಕ್ಕು ನೀಡುತ್ತಿರುವುದು ಜಗತ್ತಿನ ಎದುರು ಬಟಾಬಯಲಾಗಿದೆ.

https://twitter.com/FawadAman2/status/1440906152234024963?ref_src=twsrc%5Etfw%7Ctwcamp%5Etweetembed%7Ctwterm%5E1440906152234024963%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-young-afghan-girl-delivers-passionate-speech-for-right-to-education-4238144.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...