alex Certify ಗುಮಾನಿ ಮೇಲೆ ನೆರೆಮನೆ ಹುಡುಗಿ ಕೈಯನ್ನು ಕುದಿಯುತ್ತಿರುವ ಎಣ್ಣೆ ಬಾಣಲೆಗೆ ಅದ್ದಿದ ರಾಕ್ಷಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಮಾನಿ ಮೇಲೆ ನೆರೆಮನೆ ಹುಡುಗಿ ಕೈಯನ್ನು ಕುದಿಯುತ್ತಿರುವ ಎಣ್ಣೆ ಬಾಣಲೆಗೆ ಅದ್ದಿದ ರಾಕ್ಷಸಿ

ಬಾಲೆಯ ಕೈಯನ್ನು ಕುದಿಯುತ್ತಿರುವ ಎಣ್ಣೆಯ ಬಾಣಲೆಗೆ ಹಾಕಿರುವ ದಾರುಣ ಘಟನೆ ಗುಜರಾತಿನ ಪಠಾಣ್ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೋಲಿಸ್ ಬಂಧಿಸಿದ್ದಾರೆ. ಆರೋಪಿ ಮತ್ತು ಬಾಲೆಯು ನೆರೆಹೊರೆಯವರಾಗಿದ್ದಾರೆ.

ಆರೋಪಿ ಲಖಿ ಮಕ್ವಾನ ಮತ್ತು ಈ ಹನ್ನೊಂದು ವರ್ಷದ ಬಾಲೆಯು ಒಬ್ಬರಿಗೊಬ್ಬರು ಬಲ್ಲವರಾಗಿದ್ದಾರೆ. ಇತ್ತೀಚಿಗೆ, ಲಖಿ ಆಗುಂತಕನೊಬ್ಬನ ಜೊತೆ ಮಾತನಾಡುತ್ತಿರುವುದನ್ನು ಬಾಲಕಿ ನೋಡಿದ್ದಾಳೆ ಎನ್ನಲಾಗಿದೆ.

ಸಿಹಿ ಖಾದ್ಯಕ್ಕೆ ಹೊಸ ಟಚ್: ಗುಲಾಬ್ ಜಾಮೂನ್ ಅಲ್ಲ ರಮ್ ಬಾಲ್..!

ಇದನ್ನು ಗಮನಿಸಿದ ಲಖಿ, ಆ ಹುಡುಗಿಯನ್ನು ಕರೆದು ಇದನ್ನು ಯಾರಿಗಾದರೂ ಹೇಳಿದ್ದೀಯಾ ಎಂದು ಕೇಳಿದಾಗ, ಹುಡುಗಿಯು ಇಲ್ಲವೆಂದು ಹೇಳಿದ್ದಾಳೆ. ಆದರೂ ಗುಮಾನಿ ಬಿಡದೆ, ಲಖಿ ಪದೇ ಪದೇ ಕೇಳಿ, ಕುದಿಯುತ್ತಿರುವ ಎಣ್ಣೆ ಬಾಣಲೆಗೆ ಹುಡುಗಿಯ ಕೈ ಹಾಕಿದ್ದಾಳೆ.

ಈ ಘಟನೆ ನಡೆದ ಮೇಲೆ, ಮತ್ತೋರ್ವ ನೆರೆಯವರು ಹುಡುಗಿಯ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ, ಹುಡುಗಿಯು ಸುಟ್ಟುಹೋದ ಅಂಗೈ ತೋರಿಸಿ, ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗಿ , ಗುಜರಾತ್ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ಥಳೀಯ ಜಿಲ್ಲಾಧಿಕಾರಿಗೆ ವಿಚಾರಣೆ ನಡೆಸಿ, ವರದಿ ಕೊಡುವಂತೆ ನಿರ್ದೇಶಿಸಿದೆ. ಆ ನಂತರ ಹುಡುಗಿಯ ತಂದೆ ಲಖಿ ವಿರುದ್ಧ ದೂರನ್ನು ಕೂಡ ದಾಖಲಿಸಿದ್ದಾರೆ, ಲಖಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಕೊನೆಗೆ ಆಕೆಯನ್ನು ಸಂತಲ್ಪುರ್ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...