ವಸ್ತುವೊಂದನ್ನು ಡೆಲಿವರಿ ಮಾಡಲು ಬಂದಿದ್ದ ವಿತರಣಾ ವ್ಯಕ್ತಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ತಾನು ಬಂದಿರುವ ಪ್ರೂಫ್ ಅನ್ನು ಮನೆಯ ಮಾಲೀಕರಿಗೆ ಇಮೇಲ್ ಮೂಲಕ ಕಳುಹಿಸಿದ್ದಾನೆ. ಆ ಫೋಟೋ ನೋಡಿದ ಮನೆ ಮಾಲೀಕ ದಂಗಾಗಿರುವ ಘಟನೆ ನಡೆದಿದೆ.
ಉತ್ತರ ಇಂಗ್ಲೆಂಡಿನ ಲಂಕಶೈರ್ ನಗರದ ಪ್ರೆಸ್ಟನ್ ನ ಥಾಮಸ್ ಜೆಂಟ್ ಅವರು ಇಮೇಲ್ ಸ್ವೀಕರಿಸಿದವರು. ಡೆಲಿವರಿ ಚಾಲಕ ಅವರ ಮನೆಗೆ ಬಂದು ಕಾಲುಗಳನ್ನು ಮೇಲಕ್ಕೆತ್ತಿ ಕುಳಿತಿದ್ದ ಫೋಟೋ ಕ್ಲಿಕ್ಕಿಸಿ ಕಳುಹಿಸಿದ್ದಾನೆ. ಇದು ತಾನು ಮನೆಗೆ ಬಂದಿರುವ ಪುರಾವೆ ಎಂದು ಹೇಳಿಕೊಂಡಿದ್ದಾನೆ.
ಕೆಲವು ಕ್ರಾಫ್ಟ್ ಸಾಮಗ್ರಿಗಳನ್ನು ಆರ್ಡರ್ ಮಾಡಿದ ಜೆಂಟ್ ಅವರು ಇಮೇಲ್ ಅನ್ನು ಸ್ವೀಕರಿಸಿದ್ದಾರೆ. ಇದು ಡೆಲಿವರಿ ಚಾಲಕ ಬಂದಿರುವ ಪ್ರೂಫ್ ಆಗಿತ್ತು. ಇದರಲ್ಲಿ ಚಾಲಕನು ಟಿವಿ ಮುಂದೆ ತನ್ನ ಕಾಲುಗಳನ್ನು ಮೇಲಕ್ಕೆತ್ತಿ ಕುಳಿತಿರುವುದನ್ನು ತೋರಿಸಿದೆ.
ಈ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಜೆಂಟ್ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಡೆಲಿವರಿ ಚಾಲಕನ ಪ್ರೂಫ್ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ತಮಾಷೆಭರಿತ ಮಾತುಗಳನ್ನಾಡಿದ್ದಾರೆ.
ಇನ್ನು ಡೆಲಿವರಿ ಸಂಸ್ಥೆಯು, “ತಾಂತ್ರಿಕ ಸಮಸ್ಯೆಯ ಕಾರಣದಿಂದ ಈ ಫೋಟೋವನ್ನು ತಪ್ಪಾಗಿ ಅಪ್ಲೋಡ್ ಮಾಡಲಾಗಿದೆ.
BIG NEWS: ಸ್ವಿಸ್ ಬ್ಯಾಂಕ್ನಲ್ಲಿ ಖಾತೆ ಇರುವವರ ಆಸ್ತಿ ವಿವರ ಶೀಘ್ರದಲ್ಲೇ ಬಯಲು
ಯಾವುದೇ ಗೊಂದಲಕ್ಕೆ ನಾವು ಕ್ಷಮೆ ಯಾಚಿಸುತ್ತೇವೆ. ಈ ಪಾರ್ಸೆಲ್ ಅನ್ನು ಯಶಸ್ವಿಯಾಗಿ ತಲುಪಿಸಲಾಗಿದೆ” ಎಂದು ಹೇಳಿದೆ.