ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿ, ಭಾರತದ ಇತರ ಯಾವುದೇ ಬ್ಯಾಟ್ಸ್ಮನ್ಗಳು ಕಡಿಮೆ ಅವಧಿಯಲ್ಲಿ 350 ಸಿಕ್ಸರ್ಗಳನ್ನು ಸಿಡಿಸಲು ಸಾಧ್ಯವಿಲ್ಲ ಎಂದೆನಿಸುತ್ತದೆ. ಇದೀಗ ಐಪಿಎಲ್ ನ 34ನೇ ಪಂದ್ಯದಲ್ಲಿ ‘ಹಿಟ್ ಮ್ಯಾನ್’ ನೂತನ ಇತಿಹಾಸ ದಾಖಲಿಸುವ ತವಕದಲ್ಲಿದ್ದಾರೆ.
ಮನೆಯಿಂದ ಹೊರ ಹೋದ ಪತಿ, ಕೆಲಸಗಾರನ ಕಾವಲಿಗಿರಿಸಿ ಕೆಲಸಕ್ಕಿದ್ದ ಮಹಿಳೆ ಮೇಲೆರಗಿದ ಮಾಲೀಕ
ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ರೋಹಿತ್ ಶರ್ಮಾ ಬರೋಬ್ಬರಿ 397 ಸಿಕ್ಸರ್ ಬಾರಿಸಿದ್ದಾರೆ. ಇನ್ನೂ ಕೇವಲ 3 ಸಿಕ್ಸರ್ ಬಾರಿಸಿದರೆ ಸಾಕು ಅಲ್ಲಿಗೆ, ಇವರ ಸಿಕ್ಸರ್ಗಳ ಸಂಖ್ಯೆ 400 ರ ವರೆಗೆ ತಲುಪಲಿದೆ. ಈ ಮೂಲಕ ಟಿ-20 ಕ್ರಿಕೆಟ್ನಲ್ಲಿ 400 ಸಿಕ್ಸರ್ ಬಾರಿಸಿದ ಮೊಟ್ಟ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ರೋಹಿತ್ ಶರ್ಮಾ ಪಾಲಾಗಲಿದೆ. ರೋಹಿತ್ ಶರ್ಮಾ ಸಿಡಿಸಿರುವ ಸಿಕ್ಸರ್ ನಲ್ಲಿ 224 ಸಿಕ್ಸರ್ ಐಪಿಎಲ್ನಿಂದಲೇ ಬಂದಿದೆ. ಮುಂಬೈ ಇಂಡಿಯನ್ಸ್ ಪರ 173 ಮತ್ತು ಡೆಕ್ಕನ್ ಚಾರ್ಜಸ್ ಪರ 51 ಸಿಕ್ಸರ್ ಬಾರಿಸಿದ್ದರು.
300 ಸಿಕ್ಸರ್ಗಳ ಗಡಿ ದಾಟಿದ ಭಾರತೀಯ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ರೋಹಿತ್ ಮೊದಲ ಸ್ಥಾನದಲ್ಲಿದ್ದರೆ, ಸುರೇಶ್ ರೈನಾ (324) ಎರಡನೇ ಸ್ಥಾನ, ವಿರಾಟ್ ಕೊಹ್ಲಿ (315), ಎಂ.ಎಸ್. ಧೋನಿ (303) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ವೆಸ್ಟ್ ಇಂಡಿಯಾದ ಪವರ್-ಹಿಟ್ಟರ್ ಕ್ರಿಸ್ ಗೇಲ್ ಟಿ-20 ವೃತ್ತಿಜೀವನದಲ್ಲಿ ಅದ್ಭುತವಾದ 1042 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಪ್ರಸ್ತುತ ವೆಸ್ಟ್ ಇಂಡೀಸ್ ಸೀಮಿತ ಓವರ್ಗಳ ನಾಯಕ ಕೀರನ್ ಪೊಲಾರ್ಡ್ (756) ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಆಂಡ್ರೆ ರಸೆಲ್ (509), ಬ್ರೆಂಡನ್ ಮೆಕಲಮ್ (485), ಶೇನ್ ವ್ಯಾಟ್ಸನ್ (467), ಎಬಿಡಿ ವಿಲಿಯರ್ಸ್ (430) ಮತ್ತು ಆರನ್ ಫಿಂಚ್ (399) ನಂತರದ ಸ್ಥಾನದಲ್ಲಿದ್ದಾರೆ.