ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ತನ್ನ ಹಳೇ ಗೆಳೆಯನನ್ನು ಕೊಲೆ ಮಾಡಿಸಿದ್ದ ಮಹಿಳೆ ಸೇರಿ 4 ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟಂಬರ್ 5 ರಂದು ನೆಲಮಂಗಲ ಮಾದಾವರದ ನಿರ್ಜನ ಪ್ರದೇಶದಲ್ಲಿ ಕಿರಣ್ ಕುಮಾರ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಕುಮಾರ್ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಕಿರಣ್ ಕುಮಾರ್ ಜೊತೆಗೆ ಸಂಬಂಧ ಹೊಂದಿದ್ದ ಶ್ವೇತಾ ನಂತರದಲ್ಲಿ ಆತನನ್ನೇ ಕೊಲೆ ಮಾಡಲು ಮುಂದಾಗಿದ್ದು, ಡೇವಿಡ್ ಎಂಬವನೊಂದಿಗೆ ಸಂಬಂಧ ಬೆಳೆಸಿದ್ದಾಳೆ. 1 ಲಕ್ಷ ರೂಪಾಯಿಗೆ ಕಿರಣ್ ಕುಮಾರ್ ನನ್ನ ಕೊಲೆಮಾಡಲು ಡೇವಿಡ್ ಮೂಲಕ ಶ್ರೀಕಾಂತ್ ಮತ್ತು ದಿನೇಶ್ ಎಂಬುವರಿಗೆ ಸುಪಾರಿ ನೀಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಎಲ್ಲ ಮಾಹಿತಿ ಕಲೆಹಾಕಿ, ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.