ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ಗೆದ್ದು ಮರಳಿ ಶಾಲೆಗೆ ಬಂದ ಆರು ವರ್ಷದ ಬಾಲಕನಿಗೆ ಆತನ ಸಹಪಾಠಿಗಳು ಭಾವಪೂರ್ಣ ಸ್ವಾಗತ ಕೋರುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
ಜಾನ್ ಒಲಿವರ್ ಜ಼ಿಪ್ಪೆ ಹೆಸರಿನ ಈ ಬಾಲಕನಿಗೆ ಲಿಂಪೋಬ್ಲಾಸ್ಟಿಕ್ ಲ್ಯುಕೇಮಿಯಾ ಇದೆ ಎಂದು 2016ರಲ್ಲಿ ಪತ್ತೆ ಮಾಡಲಾಗಿತ್ತು. 2019ರಲ್ಲಿ ಕೆಮೋಥೆರಪಿ ಚಿಕಿತ್ಸೆ ಪಡೆದ ಜಾನ್ ತನ್ನ ಕೊನೆಯ ಕೆಮೋ ಶಾಟ್‌ಅನ್ನು ಕ್ರಿಸ್‌ಮನ್ ಕಳೆದ ಎರಡು ದಿನಗಳಲ್ಲಿ ಪಡೆದುಕೊಂಡು, ಮೂರು ವರ್ಷಗಳ ಸತತ ಅಂತರ್ಯುದ್ಧವನ್ನು ಕೊನೆಗೂ ಗೆದ್ದು ಬಂದಿದ್ದಾನೆ.
Good News:12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶೀಘ್ರವೇ ಸಿಗಲಿದೆ ಕೊರೊನಾ ಲಸಿಕೆ
ಜಾನ್ ತನ್ನ ತರಗತಿಗೆ ನಡೆದು ಬರುತ್ತಿದ್ದಂತೆ ಆತನ ಇಕ್ಕೆಲಗಳಲ್ಲಿ ನಿಂತ ಸಹಪಾಠಿಗಳು ಆತನಿಗೆ ಜೋರಾದ ಕರತಾಡನಗಳ ಮೂಲಕ ಮರಳಿ ಶಾಲೆಗೆ ಸ್ವಾಗತಿಸಿಕೊಂಡಿದ್ದಾರೆ.
https://twitter.com/buitengebieden_/status/1440438500357140481?ref_src=twsrc%5Etfw%7Ctwcamp%5Etweetembed%7Ctwterm%5E1440438500357140481%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-little-boy-given-a-grand-welcome-in-school-after-beating-cancer-old-clip-wins-hearts%2F815534