ನಿಮ್ಮ ಪೂರ್ಣ ಮಾಹಿತಿ, ಸಮಯ, ನಿಗಾ, ಜೀವನವೆಲ್ಲವನ್ನು ಆವರಿಸಲು ಫೇಸ್ಬುಕ್ ಮುಂದಾಗಿದೆ. ಈಗಾಗಲೇ ಜಗತ್ತಿನಲ್ಲಿ ಹಲವಾರು ಮಂದಿ ತಮ್ಮ ಜೀವನವನ್ನೇ ಫೇಸ್ಬುಕ್ ಖಾತೆಯೊಳಗೆ ಇರಿಸಿಬಿಟ್ಟಿದ್ದಾರೆ. ಆ ಮೂಲಕ ಬಾಹ್ಯ ಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡಾಗಿದೆ. ಹೊಸ ಅಪ್ಡೇಟ್ ಸಿದ್ಧಪಡಿಸಿರುವ ಫೇಸ್ಬುಕ್ ಕಂಪನಿಯು ತನ್ನ ಖಾತೆದಾರರ ಮಾಹಿತಿಗಳು, ಸುರಕ್ಷತಾ ನೀತಿ ಉಲ್ಲಂಘನೆಗಳ ಮೇಲೆ ಕಣ್ಣಿಡುವ ಸಂಸ್ಥೆಗಳಿಗೆ ಮಂಕುಬೂದಿ ಎರಚಲು ಮುಂದಾಗಿದೆ.
ʼಅಲೆಕ್ಸಾʼ ಗಣಪತಿ ಭಜನೆ ಹೇಳು ಎಂದ ಅಜ್ಜಿ…..! ವಿಡಿಯೋ ವೈರಲ್
ತನ್ನ ವೆಬ್ಸೈಟ್ ಕೋಡ್ನಲ್ಲಿ ಮಹತ್ತರ ಬದಲಾವಣೆ ಮಾಡಿರುವ ಫೇಸ್ಬುಕ್ ಎಂಜಿನಿಯರ್ಗಳ ತಂಡವು ’ನ್ಯೂಸ್ ಫೀಡ್’ನಿಂದ ಆಟೋಮ್ಯಾಟಿಕ್ ಆಗಿ ನಿಗಾ ಸಂಸ್ಥೆಗಳು ಮಾಹಿತಿ ಸಂಗ್ರಹಿಸಲು ಆಗದಂತೆ ನಿರ್ಬಂಧ ಹೇರಿದೆ. ಈ ಮೂಲಕ ಯಾವ ವಿಷಯವನ್ನು ಫೇಸ್ಬುಕ್ನಲ್ಲಿ ಹೆಚ್ಚಾಗಿ ಉತ್ತೇಜಿಸಲಾಗುತ್ತಿದೆ ಎಂದು ಸಂಶೋಧನೆ ನಡೆಸಲು ನಿಗಾ ಸಂಸ್ಥೆಗಳಿಗೆ ಕಷ್ಟವಾಗಲಿದೆ. ಕಣ್ಣಿಲ್ಲದವರಿಗೆ ಸುಧಾರಣೆ ಕ್ರಮಗಳ ಮೂಲಕ ಫೇಸ್ಬುಕ್ ಬಳಕೆಗೆ ಅವಕಾಶ ನೀಡುತ್ತಿದ್ದೇವೆ ಎಂದು ಹೇಳಿಕೊಂಡು, ಕಂಪನಿಯು ಕಳ್ಳಾಟ ಆಡುತ್ತಿದೆ ಎಂದು ಹಲವು ಸೈಬರ್ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಜಾಹೀರಾತುಗಳನ್ನು ನಿಯಂತ್ರಿಸುವ ಸಂಸ್ಥೆಗೂ ಫೇಸ್ಬುಕ್ನ ಹೊಸ ಅಪ್ಡೇಟ್ನಿಂದ ತೊಂದರೆ ಉಂಟಾಗಿದೆ. ಹೆಚ್ಚೆಚ್ಚು ಜಾಹೀರಾತುಗಳನ್ನು ನಿಗಾ ಸಂಸ್ಥೆಗಳ ಅರಿವಿಗೆ ಬಾರದಂತೆಯೇ ಫೇಸ್ಬುಕ್ ಕಂಪನಿ ಬಳಕೆದಾರರ ಖಾತೆಗಳಿಗೆ ತುರುಕುತ್ತಿದೆ ಎನ್ನಲಾಗಿದೆ.