alex Certify ನಿಮ್ಮ ಚಿರಯೌವ್ವನದ ಗುಟ್ಟೇನು..? ವಾಕಿಂಗ್ ಹೊರಟಿದ್ದ ಸಿಎಂಗೆ ಮಹಿಳೆ ಪ್ರಶ್ನಿಸಿದ್ದು ಹೀಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಚಿರಯೌವ್ವನದ ಗುಟ್ಟೇನು..? ವಾಕಿಂಗ್ ಹೊರಟಿದ್ದ ಸಿಎಂಗೆ ಮಹಿಳೆ ಪ್ರಶ್ನಿಸಿದ್ದು ಹೀಗೆ

ಚೆನ್ನೈ: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಎಂದಿನಂತೆ ವಾಕಿಂಗ್ ಹೋಗಿದ್ದಾಗ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ನಾಚಿ ನೀರಾಗಿದ್ದಾರೆ.

ಅಷ್ಟಕ್ಕೂ ಆ ಮಹಿಳೆ ಸ್ಟಾಲಿನ್ ಅವರ ಬಳಿ ಕೇಳಿದ ಪ್ರಶ್ನೆಯೇನು ಗೊತ್ತಾ..? ‘ನೀವು ಸದಾ ಯುವಕರಂತೆ ಕಾಣುತ್ತೀರಲ್ವಾ…. ಇದರ ರಹಸ್ಯವೇನು’ ಎಂದು ಕೇಳಿದ್ದಾರೆ. ಇದಕ್ಕೆ ನಾಚುತ್ತಲೇ ಉತ್ತರಿಸಿದ ಮುಖ್ಯಮಂತ್ರಿ, ‘ನಾನು ಡಯೆಟ್ ಕಂಟ್ರೋಲ್ ಮಾಡುತ್ತೇನೆ. ಹಾಗಾಗಿ ಫಿಟ್ ಆಗಿದ್ದೇನೆ’ ಎಂದು ಉತ್ತರಿಸಿದ್ದಾರೆ.

ಒಂದು ನಿಮಿಷ 31 ಸೆಕೆಂಡುಗಳಿರುವ ವಿಡಿಯೋ ತುಣುಕನ್ನು ತಮಿಳುನಾಡು ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ. ಸುಬ್ರಮಣಿಯನ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಹಿಳೆ ಈ ಪ್ರಶ್ನೆ ಕೇಳುತ್ತಿದ್ದಂತೆ ಅಲ್ಲಿದ್ದವರೆಲ್ಲಾ ನಗೆಗಡಲಲ್ಲಿ ತೇಲಿದ್ದಾರೆ.

ಡಿಎಂಕೆ ನಾಯಕ, ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ 68 ವಯಸ್ಸಾದರೂ ದಿನವೂ ವಾಕಿಂಗ್ ಹೋಗುವಾಗ ಹುಡುಗರಂತೆ ಟ್ರಾಕ್ ಪ್ಯಾಂಟ್ ಹಾಕಿಕೊಂಡು ವಾಕ್ ಮಾಡುತ್ತಾರೆ. ತಮ್ಮ ಬಿಡುವಿಲ್ಲದ ದಿನಚರಿಯ ಮಧ್ಯೆಯೂ ಆರೋಗ್ಯ ಕಾಪಾಡಿಕೊಳ್ಳಲೆಂದೇ ಸ್ವಲ್ಪ ಸಮಯ ಮೀಸಲಿಟ್ಟಿರುವುದಾಗಿ ಅವರು ಹೇಳಿದ್ದಾರೆ.

“ಮೊಮ್ಮಕ್ಕೊಳೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತೇನೆ. ಬೆಳಗ್ಗೆ ಬೇಗ ಎದ್ದು ವಾಕಿಂಗ್ ಜೊತೆಗೆ ಯೋಗ ಕೂಡ ಮಾಡುತ್ತೇನೆ. 10 ದಿನಗಳಿಗೊಮ್ಮೆ ಸೈಕ್ಲಿಂಗ್ ಮಾಡುತ್ತೇನೆ. ಇದರಿಂದ ದೇಹ ಫಿಟ್ ಆಗಿ ಇದೆ. ಹೀಗಾಗಿ ಎಷ್ಟೇ ಬ್ಯುಸಿ ಶೆಡ್ಯೂಲ್ ಇದ್ದರೂ ಕೂಡ ನನಗೆ ಆಯಾಸವಾಗುವುದಿಲ್ಲ” ಎಂದು ತಮ್ಮ ಫಿಟ್ನೆಸ್ ರಹಸ್ಯವನ್ನು ಹೇಳಿದ್ದಾರೆ.

ಇನ್ನು ಕಳೆದ ತಿಂಗಳಷ್ಟೇ ಸಿಎಂ ಸ್ಟಾಲಿನ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋ ವೈರಲ್ ಆಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...