ಸದ್ಯ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿರುವ ಕಾರಣ ರಾಜ್ಯದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಅನಗತ್ಯ ಸಂಚಾರ ನಿಷೇಧಿಸಲಾಗಿದೆ.
ಆದರೆ ಇದೆಲ್ಲಾ ತೆರವುಗೊಂಡ ಬಳಿಕ ರಾತ್ರಿ ವೇಳೆ ಮನೆಗೆ ವಾಪಾಸ್ಸಾಗಬೇಕೆಂದರೆ ಪೊಲೀಸರು ಮದ್ಯಪಾನ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಬ್ರೆಥಲೈಸರ್ ಟೆಸ್ಟ್ ಮಾಡುತ್ತಾರೆ. ಆದರೆ ಈ ಕುರಿತ ಮುಖ್ಯ ಮಾಹಿತಿಯೊಂದು ಇಲ್ಲಿದೆ.
ರಾತ್ರಿ ಮನೆಗೆ ವಾಪಸ್ಸಾಗುವಾಗ ಸಾಮಾನ್ಯವಾಗಿ ಪೊಲೀಸರು ನಿಮ್ಮನ್ನ ಪರಿಶೀಲಿಸ್ತಾರೆ ನೀವು ಮದ್ಯಪಾನ ಮಾಡಿದ್ದೀರಾ ಅನ್ನೋದನ್ನು ಪತ್ತೆ ಮಾಡಲು ಬ್ರೆಥಲೈಸರ್ ಮೂಲಕ ನಿಮ್ಮ ಶ್ವಾಸ ಪರೀಕ್ಷೆ ನಡೆಸ್ತಾರೆ.
ಎಷ್ಟೋ ಜನ ಈಗಾಗ್ಲೇ ಬಳಸಿದ ಮೌತ್ ಪೀಸ್ ನಲ್ಲಿ ನೀವು ಗಾಳಿ ಊದಬೇಕು. ಇದ್ರಿಂದ ಎಷ್ಟೋ ಮಾರಕ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ನಿಮ್ಮ ಉಸಿರು ಸೇರುತ್ತವೆ. ಈ ಪರೀಕ್ಷೆಯಿಂದ ಕೊರೊನಾ, ಎಚ್.ಐ.ವಿ.ಯಂತಹ ಮಹಾಮಾರಿ ಕೂಡ ನಿಮ್ಮನ್ನು ಆವರಿಸಿಕೊಳ್ಳುವ ಸಾಧ್ಯತೆ ಇದೆ.
ಒಂದೇ ಮೌತ್ ಪೀಸನ್ನು ಎಲ್ಲರ ಪರೀಕ್ಷೆಗೂ ಪೊಲೀಸರು ಬಳಸೋದ್ರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಆದ್ರೆ ಇದುವರೆಗೂ ಈವರೆಗೂ ಯಾರೊಬ್ಬರೂ ಈ ಬಗ್ಗೆ ಸೊಲ್ಲೆತ್ತಿಲ್ಲ. ಜನರ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಶ್ವಾಸ ಪರೀಕ್ಷೆ ವೇಳೆ ಪೊಲೀಸರು ಕಾಳಜಿ ವಹಿಸುವುದಿಲ್ಲ.
ವಿಪರ್ಯಾಸ ಅಂದ್ರೆ ಶ್ವಾಸ ಪರೀಕ್ಷೆಗೆ ಒಳಗಾಗುವ ಬಹುತೇಕರಿಗೂ ಅದರಲ್ಲಿರುವ ಅಪಾಯದ ಸುಳಿವೇ ಇಲ್ಲ. ಲಾಲಾರಸ ಒಬ್ಬರಿಂದ ಒಬ್ಬರಿಗೆ ಹರಡಿದ್ರೆ ಅದು ತುಂಬಾ ಡೇಂಜರಸ್ ಎನ್ನುತ್ತಾರೆ ವೈದ್ಯರು. ಮೌತ್ ಪೀಸ್ ಬದಲಾಯಿಸದೆ ಪೊಲೀಸರು ಜನರ ಪ್ರಾಣದ ಜೊತೆ ಆಟವಾಡುತ್ತಾಋಎ ಅನ್ನೋದು ಎಲ್ಲರ ಅಭಿಪ್ರಾಯ.