ಕೊರೊನಾ, ಜನರ ದಿನಚರಿಯಲ್ಲಿ ಬದಲಾವಣೆ ಮಾಡಿದೆ. ಕೊರೊನಾದಿಂದಾಗಿ ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಅನೇಕ ಕಂಪನಿಗಳು ಈಗ್ಲೂ ವರ್ಕ್ ಫ್ರಂ ಹೋಮ್ ನಿಯಮ ಜಾರಿಯಲ್ಲಿಟ್ಟಿವೆ. ಈ ಬಗ್ಗೆ Deloitte ಹೆಸರಿನ ಕಂಪನಿಯೊಂದು ಸರ್ವೆ ಮಾಡಿದೆ. ಈ ಸರ್ವೆಯಲ್ಲಿ ಮಹತ್ವದ ಸಂಗತಿ ಹೊರ ಬಿದ್ದಿದೆ.
ಸರ್ವೆಯಲ್ಲಿ, ಕಚೇರಿಗೆ ಬರುವ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಸರ್ವೆಯಲ್ಲಿ ಪಾಲ್ಗೊಂಡ ಶೇಕಡಾ 84ರಷ್ಟು ಮಂದಿ ಕಚೇರಿಗೆ ಬರಲು ಯಾವುದೇ ಭಯವಿಲ್ಲ ಎಂದಿದ್ದಾರೆ. ಸದ್ಯದ ಪರಿಸ್ಥಿತಿ ಸುಧಾರಿಸಿದೆ. ಕಚೇರಿಗೆ ಬರಲು ನಾವು ಸಿದ್ಧರಿದ್ದೇವೆಂದು ಸರ್ವೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.
ಶೇಕಡಾ 60ರಷ್ಟು ಮಂದಿ ಒಟ್ಟಿಗೆ ಕುಳಿತು ಮೀಟಿಂಗ್ ನಡೆಸಲು ಇಷ್ಟಪಡ್ತಿದ್ದಾರೆ. ವಿಡಿಯೋ ಕಾಲ್ ನಲ್ಲಿ ಮೀಟಿಂಗ್ ನಡೆಸಲು ಅವರಿಗೆ ಬೋರ್ ಆಗ್ತಿದೆಯಂತೆ. ಕೊರೊನಾ ಲಸಿಕೆ ಪಡೆದ ನಂತ್ರ ಜನರ ವಿಶ್ವಾಸ ಹೆಚ್ಚಾಗಿದೆ. ಕಚೇರಿಗೆ ಬರುವುದು ಸುರಕ್ಷಿತವೆಂದು ಜನರು ಭಾವಿಸ್ತಿದ್ದಾರೆ.
ಕಚೇರಿಗೆ ಹೋಗಲು ಬಯಸಿರುವ ಜನರು, ಸಾರ್ವಜನಿಕ ಸಾರಿಗೆ ಬಳಸಲು ಹಿಂದೇಟು ಹಾಕ್ತಿದ್ದಾರೆ. ಶೇಕಡಾ 70ರಷ್ಟು ಮಂದಿ, ಕಚೇರಿಗೆ ಹೋಗಲು ಸಾರ್ವಜನಿಕ ಸಾರಿಗೆಯನ್ನು ಕಡಿಮೆ ಮಟ್ಟದಲ್ಲಿ ಬಳಸುವುದಾಗಿ ಹೇಳಿದ್ದಾರೆ. ಶೇಕಡಾ 67 ಮಂದಿ, ಸಾರ್ವಜನಿಕ ಸಾರಿಗೆಯನ್ನು ಕಡಿಮೆ ಬಳಸುವುದಾಗಿ ಹೇಳಿದ್ದಾರೆ.