ಪೆಟ್ರೋಲ್ – ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡ್ತಿದ್ದಾರೆ. ಪೆಟ್ರೋಲ್-ಡಿಸೇಲ್ ಪಂಪ್ ನಮಗೆ ಎಲ್ಲ ಕಡೆ ಸಿಗ್ತಿದೆ. ಆದ್ರೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ದೊಡ್ಡ ಸಮಸ್ಯೆ. ದಾರಿ ಮಧ್ಯದಲ್ಲಿ ವಾಹನಗಳ ಚಾರ್ಜಿಂಗ್ ಖಾಲಿಯಾದ್ರೆ ಸಮಸ್ಯೆ ಎದುರಾಗುತ್ತೆ. ಇದೇ ಕಾರಣಕ್ಕೆ ಅನೇಕರು ಎಲೆಕ್ಟ್ರಿಕ್ ವಾಹನ ಖರೀದಿಗೆ ಹಿಂದೇಟು ಹಾಕ್ತಿದ್ದಾರೆ. ಆದ್ರೆ ಇನ್ಮುಂದೆ ಈ ಚಿಂತೆ ಬೇಡ.
ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೆಲವೇ ದಿನಗಳಲ್ಲಿ ಎಲ್ಲೆಡೆ ಲಭ್ಯವಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯ ಒದಗಿಸುವ ಇವಿಆರ್ವಿ ಮತ್ತು ಪಾರ್ಕ್ ಪ್ಲಸ್ ಕಂಪನಿ ಒಂದಾಗಿ, ದೇಶದಲ್ಲಿ 10,000ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್ ಗಳನ್ನು ತೆರೆಯಲು ಮುಂದಾಗಿದೆ. ಮಾಲ್, ಅಪಾರ್ಟ್ಮೆಂಟ್, ಶಾಪಿಂಗ್ ಕಾಂಪ್ಲೆಕ್ಸ್, ಹೊಟೇಲ್, ಕಾರ್ಪೋರೇಟ್ ಪಾರ್ಕ್ ಗಳಲ್ಲಿ, ಕಚೇರಿ ಸೇರಿದಂತೆ ಅನೇಕ ಕಡೆ ಚಾರ್ಜಿಂಗ್ ಪಾಯಿಂಟ್ ಒದಗಿಸಲಿದೆ. 2023ರ ವೇಳೆಗೆ ಎಲ್ಲೆಡೆ ಚಾರ್ಜಿಂಗ್ ಪಾಯಿಂಟ್ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.
ಚಾರ್ಜಿಂಗ್ ಸ್ಟೇಷನ್, ಸ್ಮಾರ್ಟ್ ಆಗಿರಲಿದ್ದು, ಎಲೆಕ್ಟ್ರಿಕ್ ವಾಹನಗಳ ಹಬ್ ಆಗಿ ಕೆಲಸ ಮಾಡಲಿದೆ ಎಂದು ಕಂಪನಿ ಹೇಳಿದೆ. 30ಕ್ಕಿಂತ ಹೆಚ್ಚು ಮಾಲ್, 250 ಕ್ಕೂ ಹೆಚ್ಚು ಕಾರ್ಪೊರೇಟ್ ಸಂಕೀರ್ಣಗಳು ಮತ್ತು 1,000 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಲ್ಲಿ ಜಾರ್ಜಿಂಗ್ ಸೌಲಭ್ಯ ಒದಗಿಸಲು ತಯಾರಿ ನಡೆದಿದೆ.