
ಬೆಂಗಳೂರು: ಚಲಿಸುತ್ತಿದ್ದ ಬಸ್ ನಲ್ಲಿ ಸಿನಿಮಾ ನೋಡುತ್ತಾ ಸಿನಿಮಾ ಸ್ಟೈಲ್ ನಲ್ಲೇ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಮುತ್ತುಕೊಟ್ಟು ಪರಾರಿಯಾಗಿದ್ದ ಇಂಜಿನಿಯರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಇಂಜಿನಿಯರ್ ಮಧುಸೂದನ ರೆಡ್ಡಿ(25) ಬಂಧಿತ ಆರೋಪಿ ಎಂದು ಹೇಳಲಾಗಿದೆ. ‘ಗೀತ ಗೋವಿಂದಂ’ ಸಿನಿಮಾ ನೋಡ್ತಿದ್ದ ಮಧುಸೂದನ ಮುತ್ತು ಕೊಟ್ಟು ಪರಾರಿಯಾಗಿದ್ದ. ಇಂಜಿನಿಯರಿಂಗ್ ವಿದ್ಯಾರ್ಥಿನಿ ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ಆಕೆಯ ಪಕ್ಕವೇ ಕುಳಿತು ಸಿನಿಮಾ ನೋಡುತ್ತಿದ್ದ ಮಧುಸೂದನ ರೆಡ್ಡಿ ಜಾಲಹಳ್ಳಿ ಕ್ರಾಸ್ ಸಮೀಪ ಚುಂಬಿಸಿ ಬಸ್ ನಿಂದ ಇಳಿದು ಹೋಗಿದ್ದಾನೆ. ಬೆಂಗಳೂರಿನ ಪೊಲೀಸರಿಗೆ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆನ್ನಲಾಗಿದೆ.