19 ವರ್ಷದ ವಿವಾಹಿತೆಯ ಮೇಲೆ ಪತಿಯ ಸಂಬಂಧಿ ಹಾಗೂ ಆತನ ಸ್ನೇಹಿತ ಸಾಮೂಹಿಕ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಯನ್ನು ಕೊಲೆಗೈದ ದಾರುಣ ಘಟನೆ ಪುಣೆಯ ಸಣ್ಣ ಗ್ರಾಮವೊಂದರಲ್ಲಿ ನಡೆದಿದೆ.
ಪತಿಯ ಸಂಬಂಧಿಯ ಜೊತೆ ವಿವಾಹಿತೆ ದೇಗುಲಕ್ಕೆ ತೆರಳಿದ್ದ ವೇಳೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಸಮೀಪದಲ್ಲಿ ಇಬ್ಬರು ವಿವಾಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಇದಕ್ಕೆ ವಿರೋಧವೊಡ್ಡುತ್ತಿದ್ದಂತೆಯೇ ಆಕೆಯ ಕುತ್ತಿಗೆಗೆ ಸ್ಕಾರ್ಫ್ ಬಿಗಿದು ಕೊಲೆಗೈದಿದ್ದಾರೆ. ಆಕೆಯ ಮುಖ ಪರಿಚಯ ಸಿಗಬಾರದು ಎಂಬ ಕಾರಣಕ್ಕೆ ಆಕೆಯ ಮುಖವನ್ನು ಛಿದ್ರಗೊಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಪುಣೆಯ ಪಿಂಪ್ರಿ ಚಿಂಚ್ವಾಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.