ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಮಹಿಳೆಯರ ಪ್ರವೇಶವನ್ನು ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮೂಲಕ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಸರ್ಕಾರ ಮೇ 2022 ರೊಳಗೆ ಅಗತ್ಯ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಿದೆ. ಈಗಾಗಲೇ ರಕ್ಷಣಾ ಸಚಿವಾಲಯ ಸಿದ್ಧತೆಗಳನ್ನು ಆರಂಭಿಸಿದೆ.
ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಗೆ ಈ ಬಗ್ಗೆ ಉತ್ತರ ನೀಡಿದೆ. ಹಿಂದೆ, ಸುಪ್ರೀಂ ಕೋರ್ಟ್, ಅಫಿಡವಿಟ್ ಸಲ್ಲಿಸಿ, ಗಡುವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿತ್ತು. ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದ್ರಲ್ಲಿ ಸಮಾನತೆ ಉಲ್ಲೇಖ ಮಾಡಲಾಗಿತ್ತು. ಮಹಿಳೆಯರಿಗೂ ಎನ್ ಡಿ ಎಯಲ್ಲಿ ಪ್ರವೇಶ ನೀಡುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.
ಆರಂಭದಲ್ಲಿ, ಕೇಂದ್ರ ಸರ್ಕಾರ ಇದನ್ನು ವಿರೋಧಿಸಿತ್ತು. ಆದರೆ ಕೋರ್ಟ್ ಸೂಚನೆ ನಂತ್ರ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಂಡಿದೆ. ಈಗ ಮಹಿಳೆಯರು ಕೂಡ ಎನ್ ಡಿ ಎ ಯಲ್ಲಿ ಪ್ರವೇಶ ಪಡೆಯಲಿದ್ದಾರೆ. 12 ನೇ ಉತ್ತೀರ್ಣರಾದ ನಂತರ, ಕಠಿಣ ಪರೀಕ್ಷೆಯ ಅಡಿಯಲ್ಲಿ ಪ್ರವೇಶವನ್ನು ನೀಡಲಾಗುತ್ತದೆ. ನಂತ್ರ ಕೆಡೆಟ್ಗಳನ್ನು ಸೈನ್ಯದಲ್ಲಿ ಅಧಿಕಾರಿ ಶ್ರೇಣಿಗೆ ಸಿದ್ಧಪಡಿಸಲಾಗುತ್ತದೆ.
ಸದ್ಯ ಪುರುಷರಿಗೆ ಮಾತ್ರ ಇಲ್ಲಿ ಪ್ರವೇಶ ನೀಡಲಾಗುತ್ತದೆ. ಎಲ್ಲಾ ಸೇನಾ ಮುಖ್ಯಸ್ಥರು ಎನ್ಡಿಎಯಿಂದ ಬಂದವರಾಗಿದ್ದಾರೆ.