ಕೊರೊನಾ ಸಮಯದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಜನರು ಹೊಸ ಕೆಲಸದ ಹುಡುಕಾಟದಲ್ಲಿದ್ದಾರೆ. ಇನ್ನು ಕೆಲವರು ಸ್ವಂತ ವ್ಯವಹಾರ ಶುರು ಮಾಡುವ ತಯಾರಿ ನಡೆಸಿದ್ದಾರೆ. ವ್ಯವಹಾರ ಪ್ರಾರಂಭಿಸುವ ಆಲೋಚನೆಯಲ್ಲಿದ್ದರೆ ಡೈರಿ ಕಂಪನಿಯ ಫ್ರ್ಯಾಂಚೈಸಿ ತೆಗೆದುಕೊಳ್ಳುವ ಮೂಲಕ ಅತ್ಯುತ್ತಮ ಲಾಭ ಗಳಿಸಬಹುದು.
ಅಮುಲ್ ಹೊರತುಪಡಿಸಿ, ದೇಶದಲ್ಲಿ ಅನೇಕ ಡೈರಿ ಕಂಪನಿಗಳಿವೆ. ಅವುಗಳಲ್ಲಿ ಪ್ಯಾರಾ ಡೈರಿ ಒಂದು. ಇದ್ರ ಜೊತೆ ವ್ಯಾಪಾರ ಆರಂಭಿಸಿ ನೀವು ಹಣ ಗಳಿಸಬಹುದು. ಹಾಲಿನ ಹೊರತಾಗಿ ಅನೇಕ ಡೈರಿ ಉತ್ಪನ್ನಗಳನ್ನು ಈ ಕಂಪನಿ ಮಾರಾಟ ಮಾಡುತ್ತಿದೆ.
ಫ್ರ್ಯಾಂಚೈಸಿ ತೆಗೆದುಕೊಳ್ಳಲು ಮೊದಲು ಕಂಪನಿಯ ಅಧಿಕೃತ ವೆಬ್ಸೈಟ್ಗೆ ಹೋಗಬೇಕು.https://www.parasdairy.com ಗೆ ಹೋಗಿ ಅಲ್ಲಿ ಫ್ರ್ಯಾಂಚೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಒಂದು ಫಾರ್ಮ್ ಕಾಣಿಸುತ್ತದೆ. ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು. ನಂತ್ರ ಕಂಪನಿ ನಿಮ್ಮನ್ನು ಸಂಪರ್ಕಿಸುತ್ತದೆ. ಫ್ರ್ಯಾಂಚೈಸಿ ತೆಗೆದುಕೊಳ್ಳಲು ಬಯಸುವವರಿಗೆ ಗೋದಾಮು ಮತ್ತು ಕಚೇರಿ ಸ್ಥಳ ಬೇಕಾಗುತ್ತದೆ.
ವ್ಯಾಪಾರದ ಗಾತ್ರಕ್ಕೆ ಅನುಗುಣವಾಗಿ ಸ್ಥಳವನ್ನು ಆಯ್ಕೆ ಮಾಡಬಹುದು. ಕಂಪನಿಯ ಫ್ರ್ಯಾಂಚೈಸಿ ತೆಗೆದುಕೊಳ್ಳಲು, 100 ಚದರ ಅಡಿಗಳಿಂದ 150 ಚದರ ಅಡಿಗಳವರೆಗಿನ ಜಾಗವನ್ನು ತೆಗೆದುಕೊಳ್ಳಬಹುದು. ವಿಭಿನ್ನ ಉತ್ಪನ್ನಗಳ ಮೇಲೆ ವಿಭಿನ್ನ ಲಾಭಾಂಶ ನೀಡಲಾಗುತ್ತದೆ. ಉತ್ಪನ್ನಗಳ ಮಾರಾಟ ಉತ್ತಮವಾಗಿದ್ದರೆ, ತಿಂಗಳಿಗೆ 2 ರಿಂದ 3 ಲಕ್ಷ ರೂಪಾಯಿಗಳನ್ನು ಗಳಿಸಬಹುದು.