ತೃತೀಯ ಲಿಂಗಿಗಳು ಎಂದರೆ ರಸ್ತೆಯ ಸಿಗ್ನಲ್ಗಳಲ್ಲಿ, ರೈಲುಗಳಲ್ಲಿ ಬಂದು ಹಣಕ್ಕಾಗಿ ಪೀಡಿಸುವವರು ಎಂಬ ಭಾವನೆ ಕಿತ್ತೊಗೆಯಲು 10 ಮಂದಿಯ ತಂಡವೊಂದು ತಮಿಳುನಾಡಿನಲ್ಲಿ ವಿಶೇಷ ಸಾಹಸ ಮಾಡಿದೆ.
10 ಮಂದಿ ತೃತೀಯ ಲಿಂಗಿಗಳು ಒಟ್ಟಾಗಿ ಮಧುರೈನ ಗೋರಿಪಾಳ್ಯಂನಲ್ಲಿ ಹೋಟೆಲ್ವೊಂದನ್ನು ಆರಂಭಿಸಿ, ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ವಿಶೇಷವೆಂದರೆ ರೋಗಿಗಳಿಗೆ, ಮಕ್ಕಳಿಗೆ ಇಲ್ಲಿ ಪೂರ್ಣ ಉಚಿತವಾಗಿ ಊಟ ನೀಡಲಾಗುತ್ತದೆ.
ಸರ್ಕಾರಿ ಆಸ್ಪತ್ರೆಯ ಬಳಿ ಇರುವ ಈ ಅಪರೂಪದ ಹೋಟೆಲ್ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಅನೀಶ್ ಶೇಖರ್ ಅವರು ನಡೆಸಿಕೊಟ್ಟು, ಉತ್ತೇಜನ ನೀಡಿದ್ದಾರೆ.
ಹೋಟೆಲ್ ನಡೆಸುತ್ತಿರುವ ತಂಡದಲ್ಲಿನ ಕುಮುದಾ ಅವರ ಪ್ರಕಾರ ’’ 6 ಲಕ್ಷ ರೂ. ಸಾಲ ಮಾಡಿ ಹೋಟೆಲ್ ಆರಂಭಿಸಿದೆವು. ನಮಗಾಗಿ ಸ್ವಸಹಾಯ ಸಂಘಗಳು ದೇಣಿಗೆ ಸಂಗ್ರಹಿಸಿವೆ. ಅಗತ್ಯ ಇರುವವರಿಗೆ ನೆರವಾಗಿ ಸಮಾಜಕ್ಕೆ ಮಾದರಿ ಆಗಬೇಕು ಎನ್ನುವ ಗುರಿ ನಮ್ಮದು,’’ ಎಂದಿದ್ದಾರೆ.
ಅಡುಗೆ ಮನೆ ಟೈಲ್ಸ್ ಹೀಗೆ ಶುಚಿಗೊಳಿಸಿ
ಇದೇ ಮಾದರಿಯಲ್ಲಿ ತೃತೀಯ ಲಿಂಗಿಗಳ ಸಮುದಾಯ ಗೌರವಯುತ ಕೆಲಸಗಳಲ್ಲಿ ನಿರತವಾಗಿ ಸಮಾಜದ ಗೌರವ ಪಡೆಯಬೇಕು. ಆ ಮೂಲಕ ಜನರ ಮನಗೆಲ್ಲಬೇಕಿದೆ ಎಂದು ತೃತೀಯ ಲಿಂಗಿಗಳ ಕಲ್ಯಾಣ ಸಂಘದ ಮುಖ್ಯಸ್ಥೆ ಜಯಚಿತ್ರಾ ಅಭಿಪ್ರಾಯಪಟ್ಟಿದ್ದಾರೆ.