alex Certify ಚೀನಾದ 4 ಕೋಟಿ ಜನರಿಗೆ ಕಾಡಲಿದೆ ‘ಅಲ್‌ ಝೈಮರ್ಸ್‌’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾದ 4 ಕೋಟಿ ಜನರಿಗೆ ಕಾಡಲಿದೆ ‘ಅಲ್‌ ಝೈಮರ್ಸ್‌’

ಒತ್ತಡದ ಜೀವನ, ಆಧುನಿಕ ಜೀವನ ಶೈಲಿಯಲ್ಲಿ ಸೇವಿಸಲಾಗುತ್ತಿರುವ ರಾಸಾಯನಿಕ ಆಹಾರಗಳು ಜನರಲ್ಲಿ ಯಾವ ರೀತಿಯ ವಿಚಿತ್ರ ಕಾಯಿಲೆಗಳನ್ನು ಹುಟ್ಟುಹಾಕುತ್ತಿದೆ ಎನ್ನುವುದು ಯಾರಿಗೂ ಅರಿಯಲು ಸಾಧ್ಯವಾಗುತ್ತಿಲ್ಲ. ಕ್ಯಾನ್ಸರ್‌, ಹಾರ್ಟ್‌ ಅಟ್ಯಾಕ್‌, ಕಿಡ್ನಿ ವೈಫಲ್ಯ ಸೇರಿದಂತೆ ಮಾರಣಾಂತಿಕ ಕಾಯಿಲೆಗಳು ಜನರನ್ನು ಕಾಡುತ್ತಲೇ ಇವೆ.

ಇವುಗಳಿಗೆ ಪೂರ್ಣ ಸಮಾಧಾನಕರ ಅಥವಾ ಪೂರ್ಣ ಗುಣಮುಖರಾಗಿಸುವ ಔಷಧಗಳೇ ಇನ್ನೂ ಸಿಕ್ಕಿಲ್ಲ. ಈ ಸಾಲಿಗೆ ಹೊಸದಾಗಿ ಸೇರ್ಪಡೆ ಆಗಿರುವುದು ‘ಅಲ್‌ಝೈಮರ್ಸ್‌’ ಎಂಬ ’ಮಹಾ ಮರೆವಿನ ಕಾಯಿಲೆ’.

ಮದುವೆಯಾಗಿರುವುದನ್ನೇ ಮರೆತು ಮಡದಿಗೆ ಮತ್ತೊಮ್ಮೆ ಪ್ರಪೋಸ್ ಮಾಡಿದ ಅಲ್ಜೈಮರ್‌ ಪೀಡಿತ

ಇದು ವೃದ್ಧರಲ್ಲೇ ಹೆಚ್ಚಾಗಿ ಕಂಡುಬರುತ್ತಿರುವ ಕಾರಣ, ಅವರ ಕುಟುಂಬಸ್ಥರು ಒಂದೇ ಒಂದು ಕ್ಷ ಣ ಕೂಡ ಅವರನ್ನು ಬಿಟ್ಟು ಬೇರೆಡೆಗೆ ಗಮನಹರಿಸುವಂತಾಗುತ್ತಿಲ್ಲ. ಯಾಕೆಂದರೆ ಸ್ವಂತ ಮಗಳು, ಮಗ, ಮೊಮ್ಮಕ್ಕಳೇ ಎದುರಿಗಿದ್ದರೂ ಕೂಡ ಯಾರೂ ಜ್ಞಾಪಕವೇ ಇರುವುದಿಲ್ಲ. ಬುದ್ಧಿ ನಡೆಸಿದ ಕಡೆಗೆ ಹೊರಟು ಹೋಗುತ್ತಿರುತ್ತಾರೆ !

ಹೌದು, ಎಷ್ಟೋ ಮಂದಿ ಕಾಣೆಯಾಗಿ ವರ್ಷಗಳೇ ಆಗಿವೆ. ನೋಡಲು ಆರೋಗ್ಯಕರವಾಗಿ ಕಾಣಿಸಿದರೂ ಕೂಡ ಅವರ ಮಿದುಳು ಬಹಳ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುತ್ತದೆ. ಹಲವರಿಗೆ ಅವರು ಯಾರೆನ್ನುವುದೇ ಬಹಳ ಸಲ ಜ್ಞಾಪಕಕ್ಕೇ ಬರಲ್ಲ.

ಇಂಥದ್ದೇ ಪ್ರಕರಣಗಳು ಸದ್ಯ ಚೀನಾದಲ್ಲಿ ಹೆಚ್ಚಾಗುತ್ತಿವೆ. ವಿಶ್ವದಲ್ಲಿರುವ ಅಲ್‌ಝೈಮರ್ಸ್‌ ಪೀಡಿತರ ಪೈಕಿ ಶೇ.25ರಷ್ಟು ಮಂದಿ ಚೀನಾದಲ್ಲೇ ಇದ್ದಾರೆ. ಸುಮಾರು 1 ಕೋಟಿ ಜನರಿಗೆ ಈ ಮರೆವಿನ ಕಾಯಿಲೆ ಆವರಿಸಿದೆ. ಇಲ್ಲಿನ ಬಹುಪಾಲು ಜನರು ಮಧ್ಯವಯಸ್ಸಿನಿಂದ ವೃದ್ಧಾಪ್ಯದ ಕಡೆಗೆ ಸಾಗುತ್ತಿರುವುದೇ ಅಲ್‌ಝೈಮರ್ಸ್‌ ಸಂಖ್ಯೆ ಹೆಚ್ಚಲು ಮೂಲ ಕಾರಣ ಎನ್ನಲಾಗಿದೆ. 2050ರ ವೇಳೆ ಚೀನಾದಲ್ಲಿ4 ಕೋಟಿ ಮರೆವಿನ ಕಾಯಿಲೆಯುಳ್ಳ ಜನರು ಇರುತ್ತಾರಂತೆ.

ಲಂಡನ್‌ ಸ್ಕೂಲ್‌ ಆಫ್‌ ಹೈಜೀನ್‌ ಆ್ಯಂಡ್‌ ಟ್ರಾಪಿಕಲ್‌ ಮೆಡಿಸಿನ್‌ ನಡೆಸಿರುವ ಅಧ್ಯಯನದಲ್ಲಿ ಇದು ಬಹಿರಂಗಪಟ್ಟಿದೆ. 2016ರಿಂದ ಈಚೆಗೆ ಚೀನಾದಲ್ಲಿ ಸುಮಾರು 500 ಅಲ್‌ಝೈಮರ್ಸ್‌ ಪೀಡಿತರು ಮನೆಗಳಿಂದ ಕಾಣೆಯಾಗಿದ್ದಾರೆ. ಅಮೆರಿಕದಲ್ಲಿ ಸದ್ಯ 62 ಲಕ್ಷ ಅಲ್‌ಝೈಮರ್ಸ್‌ ಪೀಡಿತರಿದ್ದಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...