alex Certify ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ…! ಈ ಕುರಿತು ವೈದ್ಯರಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ…! ಈ ಕುರಿತು ವೈದ್ಯರಿಂದ ಮಹತ್ವದ ಮಾಹಿತಿ

ಬಹಳ ದಿನಗಳಿಂದ ಇದ್ದ ಭಯವೊಂದು ನಿಧಾನವಾಗಿ ವಾಸ್ತವದ ರೂಪ ತಾಳುತ್ತಿದ್ದು, 40 ವರ್ಷ ವಯಸ್ಸಿನ ಒಳಗಿನ ಮಂದಿಯಲ್ಲೂ ಹೃದಯಾಘಾತವಾಗುವ ಸಾಧ್ಯತೆಗಳು ದಿನೇ ದಿನೇ ಹೆಚ್ಚುತ್ತಲೇ ಇದೆ.

ಪುರುಷರಲ್ಲಿ ಸಾಮಾನ್ಯವಾಗಿ 50ರ ಹರೆಯದಲ್ಲಿ ಹಾಗೂ ಮಹಿಳೆಯರಲ್ಲಿ 60ರ ಹರೆಯದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಆಧುನಿಕ ವೈದ್ಯಕೀಯ ಲೋಕ ಲೆಕ್ಕಾಚಾರ ಮಾಡುತ್ತಿದ್ದ ನಡುವೆಯೇ ಈ ರೀತಿಯ ಹೊಸದೊಂದು ಆತಂಕ ಬೇರು ಬಿಡುತ್ತಿದೆ.

“40ಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗುವುದನ್ನು ನೋಡುವುದು ಬಹಳ ಅಪರೂಪವಾಗಿತ್ತು. ಈಗ ಆಗುತ್ತಿರುವುದನ್ನು ನೋಡಿದರೆ ನಾವೆಲ್ಲೊ ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನಿಸುತ್ತಿದೆ,” ಎಂದು ಬೋಸ್ಟನ್‌ನಲ್ಲಿರುವ ಹಾರ್ವಡ್‌ ವೈದ್ಯಕೀಯ ಶಾಲೆಯ ಪ್ರೊಫೆಸರ್‌ ರಾನ್ ಬ್ಲಾಂಕ್‌ಸ್ಟೀನ್ ತಿಳಿಸಿದ್ದಾರೆ.

ಈ ಸಮಸ್ಯೆ ಕೇವಲ ಪಾಶ್ಚಾತ್ಯ ಜಗತ್ತಿಗೆ ಮಾತ್ರವೇ ಸೀಮಿತವಾಗಿಲ್ಲ. ಭಾರತದಲ್ಲೂ ಸಹ ಈ ರೀತಿ ದಿಢೀರ್‌ ಹೃದಯಾಘಾತಗಳಿಂದ ಸಾವು ಸಂಭವಿಸುವುದು ಬಲು ಸಾಮಾನ್ಯವಾಗುತ್ತಿದೆ. ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್‌ ಶುಕ್ಲಾ ಈ ಪಟ್ಟಿಗೆ ಸೇರಿದ ಹೊಸ ಹೆಸರಾಗಿದೆ ಅಷ್ಟೇ.

ಈ ಬಗ್ಗೆ ವಿವರಣೆ ಕೊಡುವ ಮುಂಬೈ ಗ್ಲೋಬಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಚರಣ್ ಲಂಜೇವಾರ್‌, “ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಲು ಹಲವಾರು ಕಾರಣಗಳಿವೆ. ನಿಷ್ಕ್ರಿಯ ಜೀವನಶೈಲಿ, ದೈಹಿಕ ವ್ಯಾಯಾಮದ ಕೊರತೆಗಳು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಲು ಮುಖ್ಯ ಕಾರಣಗಳಾಗುತ್ತವೆ” ಎಂದಿದ್ದಾರೆ.

“ತಮ್ಮ 20ರ ವಯೋಮಾನದಲ್ಲೇ ಹೃದಯಾಘಾತಕ್ಕೆ ತುತ್ತಾಗುವ ಮಂದಿ, ಮಹಿಳೆಯರನ್ನೂ ಒಳಗೊಂಡು, ಹೆಚ್ಚಾಗುತ್ತಿದ್ದಾರೆ. ದಶಕದ ಹಿಂದೆ ಹೀಗೆಲ್ಲಾ ಆಗುತ್ತಿರಲಿಲ್ಲ. ಜೊತೆಗೆ ಈ ಕೋವಿಡ್ ಸಾಂಕ್ರಮಿಕದ ಕಾಲಘಟ್ಟದಲ್ಲಿ ಹೃದಯಾಘಾತಗಳ ಕೇಸ್‌ಗಳು ಇನ್ನಷ್ಟು ಹೆಚ್ಚಾಗಿರುವುದನ್ನು ಕಂಡಿದ್ದೇವೆ,” ಎನ್ನುತ್ತಾರೆ ಚರಣ್.

ಹೃದಯಾಘಾತಕ್ಕೆ ತುತ್ತಾಗುವ ಭಾರತೀಯ ಪುರುಷರ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ

“ಶಿಸ್ತಿನ ಪಥ್ಯ, ವಾಸ್ತವಿಕ ಹಾಗೂ ಸುದೀರ್ಘವಾಧಿಗೆ ಮಾಡಬಹುದಾದ ವ್ಯಾಯಾಮದ ಅಭ್ಯಾಸ, ಒತ್ತಡ ರಹಿತ ಜೀವನಗಳು ಕಡಿಮೆ ವಯಸ್ಸಿನಲ್ಲಿ ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡುವ ಉತ್ತಮ ಕ್ರಮಗಳು. ಪ್ರತಿಯೊಬ್ಬ ವಯಸ್ಕನೂ ಸಹ ದೈಹಿಕ ತಜ್ಞರ ಬಳಿ ತಪಾಸಣೆಗೆ ಒಳಪಟ್ಟು, 30ರ ವಯಸ್ಸಿಗೆ ಕಾಲಿಡುವ ಮುನ್ನವೇ ನಿರ್ದಿಷ್ಟ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ರಕ್ತ ಪರೀಕ್ಷೆಯಲ್ಲಿ ಲಿಪಿಡ್ ಹಾಗೂ ಸಕ್ಕರೆ ಅಂಶವನ್ನು ಪರಿಶೀಲನೆ ಮಾಡಬೇಕು,” ಎಂದು ವಿವರಿಸಿದ್ದಾರೆ ಚರಣ್.

ನಡಿಗೆ ಹಾಗೂ ಸೈಕ್ಲಿಂಗ್‌ಗಳಿಂದಾಗಿ ಹೃದಯಾಘಾತದ ಸಾಧ್ಯತೆಯು ಬ್ರಿಟನ್‌ನ 4.3 ಕೋಟಿ ಮಂದಿಯಲ್ಲಿ ಕಡಿಮೆಯಾಗಿದೆ ಎಂದು ಬ್ರಿಟನ್‌ನ ಲೀಡ್ಸ್‌ ವಿವಿಯ ಅಧ್ಯಯನವೊಂದು ತಿಳಿಸಿದೆ.

“ನಿಮ್ಮ ಕೆಲಸದ ಸ್ಥಳಕ್ಕೆ ತಲುಪಬೇಕಾದಲ್ಲಿ ನಡಿಗೆ ಹಾಗೂ ಸೈಕ್ಲಿಂಗ್ ಮಾಡಬೇಕಾದ ಅಗತ್ಯ ಹೆಚ್ಚಾದಲ್ಲಿ ಖುಷಿ ಪಡಿ. ನಮ್ಮ ಬ್ಯುಸಿ ಜೀವನದಲ್ಲಿ ವ್ಯಾಯಾಮ ಮಾಡಲು ಸಮಯ ಸಿಗದೇ ಇರಬಹುದು. ಆದರೆ ವ್ಯಾಯಾಮ ಮಾಡಲು ನೀವು ಜಿಮ್‌ಗೆ ಹೋಗಿ ಗಂಟೆಗಟ್ಟಲೇ ಟ್ರೆಡ್‌ಮಿಲ್ ಮೇಲೆ ಕಳೆಯಬೇಕೆಂದೇನಿಲ್ಲ,” ಎನ್ನುವ ಬ್ರಿಟಿಷ್ ಹಾರ್ಟ್ ಫೌಂಡೇಶನ್‌ನ ನಿರ್ದೇಶಕ ಮೆಟಿನ್ ಅವ್ಕಿರನ್, “ನಿಮ್ಮ ಸಂಚಾರಕ್ಕೆ ಬೈಸಿಕಲ್ ಅವಲಂಬಿಸಿದಲ್ಲಿ, ನಿಮ್ಮ ಹೃದಯ ಬಡಿತಕ್ಕೆ ಉತ್ತಮ. ಇದು ಆಯ್ಕೆಯಲ್ಲ, ಕೆಲ ಬೀದಿಗಳ ಹಿಂದೆಯೇ ನಿಮ್ಮ ವಾಹನ ಪಾರ್ಕ್ ಮಾಡುವುದು ಅಥವಾ ಕೆಲ ಸ್ಟಾಪ್‌ಗಳ ಹಿಂದೆಯೇ ಬಸ್‌ನಿಂದ ಇಳಿಯುವುದು ಇನ್ನಷ್ಟು ಆರೋಗ್ಯಕರ ಜೀವನಕ್ಕೆ ನೆರವಾಗಬಲ್ಲವು,” ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...