ನವದೆಹಲಿ: ಅಕ್ಟೋಬರ್ ನಿಂದ ಲಸಿಕೆ ಮೈತ್ರಿ ಯೋಜನೆಯಡಿ ವಿದೇಶಗಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.
ದೇಶದಲ್ಲಿ ಲಸಿಕೆ ಕೊರತೆಯ ಕಾರಣಕ್ಕೇ ಯೋಜನೆಯನ್ನು ನಿಲ್ಲಿಸಲಾಗಿತ್ತು. ಇದುವರೆಗೆ ಭಾರತ 70 ದೇಶಗಳಿಗೆ 6.5 ಕೋಟಿ ಕೊರೋನಾ ಲಸಿಕೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ.
ಲಸಿಕೆ ಮೈತ್ರಿ ಯೋಜನೆಯಡಿ ಮುಂದಿನ ತಿಂಗಳಿನಿಂದ ಹೆಚ್ಚುವರಿ ಲಸಿಕೆಗಳನ್ನು ರಫ್ತು ಮಾಡಲಾಗುತ್ತದೆ. ಲಸಿಕೆಯನ್ನು ರಫ್ತು ಮಾಡಿದರೂ ಕೂಡ ದೇಶದ ನಾಗರಿಕರಿಗೆ ಅಗತ್ಯವಿರುವ ಲಸಿಕೆ ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.