ರಷ್ಯಾದ ಯುನಿವರ್ಸಿಟಿ ಕ್ಯಾಂಪಸ್ ನಲ್ಲಿ ಗುಂಡಿನ ದಾಳಿ ನಡೆದಿದ್ದು, ಎಂಟು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಈ ವರ್ಷ ಶಿಕ್ಷಣ ಕೇಂದ್ರದಲ್ಲಿ ನಡೆದ 2ನೇ ದಾಳಿ ಇದಾಗಿದೆ. ಸೋಮವಾರ ಮಧ್ಯ ರಷ್ಯಾದ ಪೆರ್ಮ್ ಸ್ಟೇಟ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಓರ್ವ ವಿದ್ಯಾರ್ಥಿ ಫೈರಿಂಗ್ ಮಾಡಿದ್ದು, ದುರ್ಘಟನೆಯಲ್ಲಿ 8 ಮಂದಿ ಅಸುನೀಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದ. ಹೆಲ್ಮೆಟ್ ಸೇರಿದಂತೆ, ಆಯುಧವನ್ನು ಹೊತ್ತುಕೊಂಡು ಕ್ಯಾಂಪಸ್ ಮೂಲಕ ನಡೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ಆರ್ಮಿ ಕಮಾಂಡೋ ಯುನಿರ್ಫಾರ್ಮ್ ನಲ್ಲಿ ವಿಡಿಯೋಕಾಲ್; ಪಾಕಿಸ್ತಾನದ ISI ಜೊತೆ ಸಂಪರ್ಕ; ಬಟ್ಟೆ ವ್ಯಾಪಾರಿಯ ಖತರ್ನಾಕ್ ಕೆಲಸ ಬಿಚ್ಚಿಟ್ಟ ಸಿಸಿಬಿ
ಮೇ 2021 ರಲ್ಲಿ 19 ವರ್ಷದ ಬಂದೂಕುಧಾರಿಯೊಬ್ಬ ಮಧ್ಯ ರಷ್ಯಾದ ಕಜಾನ್‌ನಲ್ಲಿರುವ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿ ಒಂಬತ್ತು ಜನರನ್ನು ಕೊಂದಿದ್ದನು. ದಾಳಿ ಮಾಡಿದಾತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಲಾಗಿದೆ. ಇನ್ನು ಈ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಗನ್ ನಿಯಂತ್ರಣ ಕಾನೂನುಗಳ ಮರುಪರಿಶೀಲನೆಗೆ ಕರೆ ನೀಡಿದ್ದಾರೆ.