alex Certify ಸುರಕ್ಷಿತ ಹೂಡಿಕೆ ಬಯಸುವವರಿಗೆ ಇಲ್ಲಿದೆ ಉತ್ತಮ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಕ್ಷಿತ ಹೂಡಿಕೆ ಬಯಸುವವರಿಗೆ ಇಲ್ಲಿದೆ ಉತ್ತಮ ಅವಕಾಶ

ಸುರಕ್ಷಿತ ಹೂಡಿಕೆ ಬಹಳ ಮುಖ್ಯ. ಜನರು ಸುರಕ್ಷಿತ ಹೂಡಿಕೆ ಜೊತೆ ಹೆಚ್ಚು ಲಾಭ ಬರುವ ಯೋಜನೆಯ ಹುಡುಕಾಟ ನಡೆಸುತ್ತಾರೆ. ಅಂಥವರಿಗೆ ಅಂಚೆ ಕಚೇರಿ ಯೋಜನೆಗಳು ದಿ ಬೆಸ್ಟ್.

ಅಂಚೆ ಕಚೇರಿ ಟೈಂ ಡೆಪಾಸಿಟ್ : ಅಂಚೆ ಕಚೇರಿಯ ಟೈಂ ಡೆಪಾಸಿಟ್ ನ 1 ವರ್ಷದಿಂದ 3 ವರ್ಷದ ಯೋಜನೆಯಲ್ಲಿ ಶೇಕಡಾ 5.5 ಬಡ್ಡಿ ಸಿಗುತ್ತದೆ. ಇದರಲ್ಲಿ ಹೂಡಿಕೆ ಮಾಡಿದರೆ, ಸುಮಾರು 13 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ. 5 ವರ್ಷಗಳ ಯೋಜನೆ ಠೇವಣಿ ಮೇಲೆ ಶೇಕಡಾ 6.7ರಷ್ಟು ಬಡ್ಡಿ ಸಿಗುತ್ತದೆ.

ಅಂಚೆ ಕಚೇರಿ ಉಳಿತಾಯ ಯೋಜನೆ: ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿರುವ ಹಣ ದ್ವಿಗುಣಗೊಳ್ಳಲು ದೀರ್ಘ ಸಮಯ ಕಾಯಬೇಕಾಗುತ್ತದೆ.  ವಾರ್ಷಿಕ ಶೇಕಡಾ 4.0ರಷ್ಟು ಬಡ್ಡಿ ಸಿಗಲಿದೆ. 18 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ : ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪ್ರಸ್ತುತ ಶೇಕಡಾ 6.6ರಷ್ಟು ಬಡ್ಡಿ ಸಿಗ್ತಿದೆ.ಈ ಯೋಜನೆಯಲ್ಲಿ ಹಣ  ಹೂಡಿಕೆ ಮಾಡಿದರೆ, ಶೇಕಡಾ 10.91 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ : ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಪ್ರಸ್ತುತ ಶೇಕಡಾ 7.4ರ ಬಡ್ಡಿ ಸಿಗ್ತಿದೆ. ಈ ಯೋಜನೆಯಲ್ಲಿ ಹಣ ಸುಮಾರು 9.73 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...