alex Certify ಕೊರೊನಾ ಸಂಕಷ್ಟದಲ್ಲೂ ಲಕ್ಷ್ಮೀ ಕಟಾಕ್ಷ: ತುಟ್ಟಿಭತ್ಯೆ ಸೇರಿ ವಿವಿಧ ರೂಪಗಳಲ್ಲಿ ಹೆಚ್ಚಾಯ್ತು ಇವರ ಆದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದಲ್ಲೂ ಲಕ್ಷ್ಮೀ ಕಟಾಕ್ಷ: ತುಟ್ಟಿಭತ್ಯೆ ಸೇರಿ ವಿವಿಧ ರೂಪಗಳಲ್ಲಿ ಹೆಚ್ಚಾಯ್ತು ಇವರ ಆದಾಯ

ಕೊರೊನಾ ಸಂಕಷ್ಟದಿಂದ ಹಲವು ಉದ್ದಿಮೆಗಳು ನಷ್ಟಕ್ಕೆ ದೂಡಲ್ಪಟ್ಟಿವೆ. ಅಲ್ಲಿನ ಸಿಬ್ಬಂದಿಗೆ ಸಂಬಳ ಕಟ್‌ ಮಾಡಲಾಗಿದೆ. ಇನ್ನೂ ಕೂಡ ಪೂರ್ಣ ಸಂಬಳ ಕಾಣದೆಯೇ ನಿತ್ಯ ದುಡಿಯುತ್ತಿರುವವರು ಹಲವರಾದರೆ, ಸಂಬಳವೇ ಇಲ್ಲದೇ ಕೆಲಸದಿಂದ ಕಿತ್ತೊಗೆಯಲಾಗಿರುವವರು ಕೆಲವು ಮಂದಿ ಇದ್ದಾರೆ. ಆದರೆ ಕೇಂದ್ರ ಸರ್ಕಾರದ ಲಕ್ಷಾಂತರ ನೌಕರರು ಮಾತ್ರವೇ ಏಳನೇ ವೇತನ ಆಯೋಗದ ಜಾರಿ ಅಡಿಯಲ್ಲಿ ತುಟ್ಟಿ ಭತ್ಯೆ ಹೆಸರಿನಲ್ಲಿ ಭಾರಿ ವೇತನ ಏರಿಕೆ ಕಾಣುತ್ತಿದ್ದಾರೆ.

ನೌಕರರು ಹಾಗೂ ಪಿಂಚಣಿದಾರರಿಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಮೂಲ ವೇತನವನ್ನು 17% ನಿಂದ 28%ಗೆ ಹೆಚ್ಚಳ ಮಾಡಿತ್ತು. ಕೆಲವೇ ದಿನಗಳಲ್ಲಿ ಇದನ್ನು 31%ಗೆ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಈ ಮೂಲಕ ನೌಕರರಿಗೆ ನೀಡಲಾಗುವ ಮನೆ ಬಾಡಿಗೆ ಭತ್ಯೆ ಕೂಡ ಏರಿಕೆ ಆಗಲಿದೆ. ನೌಕರರು ವಾಸಿಸುತ್ತಿರುವ ನಗರಗಳ ವಿಭಾಗಕ್ಕೆ ಅನುಗುಣವಾಗಿ ಈಗಾಗಲೇ ಎಚ್‌ಆರ್‌ಎ ಮೊತ್ತವನ್ನು 27%, 18% ಹಾಗೂ 9%ನಂತೆ ಹೆಚ್ಚಳ ಕಂಡಿದ್ದಾರೆ.
ಇದರಿಂದಾಗಿ ಕೇಂದ್ರ ಸರಕಾರಿ ನೌಕರರ ಪಾಲಿಗೆ 2020 ಮತ್ತು 2021 ವರ್ಷಗಳು ಲಕ್ಷ್ಮೀ ಕಟಾಕ್ಷ ಸಿಕ್ಕ ವರ್ಷಗಳಾಗಿ ಮಾರ್ಪಟ್ಟಿವೆ. ಇದರ ನಡುವೆಯೇ ಕಳೆದ ವರ್ಷ ಸರ್ಕಾರ ಘೋಷಿಸಿದಂತೆ ಲಕ್ಷಾಂತರ ನೌಕರರಿಗೆ ಲಾಭವಾಗುವ ನಿಟ್ಟಿನಲ್ಲಿ ಹೌಸ್‌ ಬಿಲ್ಡಿಂಗ್‌ ಅಡ್ವಾನ್ಸ್‌ (ಎಚ್‌ಬಿಎ) ಯೋಜನೆ ಮೂಲಕ 7.9% ಬಡ್ಡಿ ದರದಲ್ಲಿ ಗೃಹ ಸಾಲ ಕೂಡ ನೌಕಕರಿಗೆ ಸಿಗಲಿದೆ.

ಇನ್ನು ಕೇಂದ್ರ ಸರ್ಕಾರದ ನಿವೃತ್ತ ನೌಕರರು ಪಡೆಯುತ್ತಿರುವ ಕೌಟುಂಬಿಕ ಪಿಂಚಣಿ ಮಿತಿಯನ್ನು ಕೂಡ 45 ಸಾವಿರ ರೂ.ನಿಂದ 1.25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಪ್ರತಿ ದಿನ 4 ಗಂಟೆ ಕೆಲಸ ಮಾಡಿ ಗಳಿಸಿ 25-30 ಸಾವಿರ ರೂ.
ಆಧುನಿಕ ತಂತ್ರಜ್ಞಾನದ ಸೌಲಭ್ಯ ನೀಡಲು ಮುಂದಾಗಿರುವ ಸರ್ಕಾರವು ಪಿಂಚಣಿದಾರರಿಗೆ ಎಸ್‌ಎಂಎಸ್‌, ಇ-ಮೇಲ್‌ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಪೆನ್ಷನ್‌ ಸ್ಲಿಪ್‌ ನೀಡಲಾಗುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...