ಅಂಡರ್ಪಾಸ್ನ ಪ್ರವಾಹದಲ್ಲಿ ಕಾರು ಸಿಲುಕಿಕೊಂಡ ಪರಿಣಾಮ ಯುವ ಮಹಿಳಾ ವೈದ್ಯರು ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ತಮಿಳುನಾಡಿನ ಪುದುಕೊಟ್ಟೈಯ ತುಡೈಯೂರ್ನಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಈ ಪ್ರದೇಶದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಹೀಗಾಗಿ ಸುರಂಗಮಾರ್ಗವು ಮಳೆನೀರಿನಿಂದ ತುಂಬಿತ್ತು. ಈ ವೇಳೆ ಡಾ. ಸತ್ಯ ಅವರ ಕಾರು 4 ಅಡಿ ಆಳದ ನೀರಿನಲ್ಲಿ ಸಿಲುಕಿಕೊಂಡಿದೆ. ಗಾಬರಿಗೊಂಡು ಕಾರಿನ ಡೋರ್ ತೆಗೆಯಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.
ಈ ಮಧ್ಯೆ ವೈದ್ಯೆಯ ಅತ್ತೆ ಹಿಂಬದಿ ಸೀಟ್ ಗೆ ಹೋಗುವಲ್ಲಿ ಯಶಸ್ವಿಯಾದ್ರು. ಇವರನ್ನು ಎದುರಿನಿಂದ ಬರುತ್ತಿದ್ದ ಟ್ರಕ್ ಚಾಲಕರು ರಕ್ಷಿಸಿದರು. ಡಾ. ಸತ್ಯಾ ಅವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾದ್ರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಮೃತ ವೈದ್ಯೆಯ ಅತ್ತೆ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಅಂಡರ್ ಪಾಸ್ ನಲ್ಲಿ ನಡೆದ ದುರಂತಕ್ಕೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.