alex Certify ಕೇಂದ್ರ ಸಚಿವರಿಗೆ ಥಳಿಸಿದ್ದನಂತೆ ಸೆಕ್ಯುರಿಟಿ ಗಾರ್ಡ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸಚಿವರಿಗೆ ಥಳಿಸಿದ್ದನಂತೆ ಸೆಕ್ಯುರಿಟಿ ಗಾರ್ಡ್‌…!

ದೆಹಲಿಯ ಪ್ರತಿಷ್ಠಿತ ಸಫ್ದರ್‌ಜಂಗ್‌ ಆಸ್ಪತ್ರೆಗೆ ಜನಸಾಮಾನ್ಯರಂತೆ ಬಟ್ಟೆಯನ್ನು ಧರಿಸಿಕೊಂಡು ಕೇಂದ್ರ ಸಚಿವರೊಬ್ಬರು ಪರಿಶೀಲನೆಗೆ ತೆರಳಿದ್ದರು. ಆ ವೇಳೆ ವಿಶ್ರಮಿಸಲು ಬೆಂಚ್‌ ಮೇಲೆ ಕುಳಿತಾಗ ಓಡಿ ಬಂದ ಸೆಕ್ಯುರಿಟಿ ಗಾರ್ಡ್‌ ಒಬ್ಬ ಅವರಿಗೆ ಥಳಿಸಿದ್ದನಂತೆ.

ಆಸ್ಪತ್ರೆಯ ನರ್ಸ್‌ಗಳಂತೆಯೇ, ಭದ್ರತಾ ಸಿಬ್ಬಂದಿ ಕೂಡ ವಿನಮ್ರ ಹಾಗೂ ಸೇವಾ ಮನೋಭಾವ ಹೊಂದಿರಬೇಕು. ಗಡುಸುತನ ತೋರಿಸಬಾರದು ಎಂದು ತಮ್ಮ ಹಳೆಯ ಅನುಭವವನ್ನು ಮೆಲುಕು ಹಾಕಿದ್ದು ಬೇರೆ ಯಾರೂ ಅಲ್ಲ, ನಮ್ಮ ಹಾಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಅವರು.

ಒಂದು ಮೆಟ್ರಿಕ್‌ ಟನ್‌ ಸಾಮರ್ಥ್ಯ‌ದ ಆಮ್ಲಜನಕ ಉತ್ಪಾದನೆ ಘಟಕ ಹಾಗೂ ಮಕ್ಕಳ ತುರ್ತು ಚಿಕಿತ್ಸೆ ವಿಭಾಗವನ್ನು ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ ಉದ್ಘಾಟಿಸಿದ ಬಳಿಕ ಸಚಿವ ಮನ್ಸುಖ್‌ ಅವರು ಈ ಮಾತುಗಳನ್ನು ಹೇಳಿದ್ದಾರೆ.

BIG NEWS: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ ಸನ್ಮಾನ; ಇಲ್ಲವಾದರೆ ಸತ್ಯಾಗ್ರಹ; ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಆಸ್ಪತ್ರೆಯಲ್ಲಿ 1500 ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಇದ್ದರೂ, ನರ್ಸ್‌ಗಳು, ಶುಶ್ರೂಷಕಿಯರು ಮಾತ್ರವೇ ರೋಗಿಗಳಿಗೆ ನೆರವಾಗಬೇಕು ಎಂಬ ಧೋರಣೆ ಎದ್ದುಕಾಣುತ್ತಿದೆ. ಇದು ಸರಿಯಲ್ಲ. ಸೇವಾ ಮನೋಭಾವ ರೂಢಿಸಿಕೊಳ್ಳಿರಿ ಎಂದು ಸಲಹೆ ನೀಡಿದರು.

ಅಂದಹಾಗೆ, ಸಚಿವರನ್ನು ಥಳಿಸಿದ ಘಟನೆ ಬಗ್ಗೆ ಪ್ರಧಾನಿ ಮೋದಿ ಅವರಿಗೂ ಮಾಹಿತಿ ನೀಡಿದ್ದರಂತೆ. ಗಾರ್ಡ್‌ ಅನ್ನು ಕಿತ್ತೊಗೆಯುವಂತೆ ಕೆಲವರಿಂದ ಸಲಹೆ ಬಂದರೂ ವ್ಯವಸ್ಥೆ ಬದಲಿಸೋಣ, ವ್ಯಕ್ತಿಯನ್ನು ಏನು ಮಾಡುವುದು ಬೇಡ ಎಂದು ಸಚಿವ ಮನ್ಸುಖ್‌ ಸಮಾಧಾನಪಡಿಸಿದ್ದರಂತೆ.

ಘಟನೆ ಯಾವಾಗ ನಡೆದಿತ್ತೆಂಬ ಮಾಹಿತಿ ಗೊತ್ತಾಗಿಲ್ಲ. ಆದರೆ ಸಚಿವರು ತಮಗಾದ ಅನುಭವವನ್ನು ಈಗ ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...