ದಾವಣಗೆರೆ: ವಿಪಕ್ಷದವರನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಪ್ರತಿಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆ ಹೆಣೆದಿವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಯಡಿಯೂರಪ್ಪ, ವಿಪಕ್ಷಗಳು ಅವರದೇ ಆದ ಲೆಕ್ಕಾಚಾರದ ಮೂಲಕ ತಂತ್ರಗಾರಿಕೆ ನಡೆಸಿದ್ದಾರೆ. ಈಗಾಗಲೇ ಬಿಜೆಪಿಯ ಕೆಲ ನಾಯಕರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರೆ. ಹಾಗಾಗಿ ಯಾರನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಹೇಳಿದರು.
ವಿಶ್ವವೇ ಅಚ್ಚರಿಯಿಂದ ನೋಡುವ ನಾಯಕತ್ವ ನಮಗೆ ಸಿಕ್ಕಿದೆ. ಪ್ರಧಾನಿ ಮೋದಿ ನಾಯಕತ್ವ ನಮಗೆ ಸಿಕ್ಕಿರುವುದು ನಮ್ಮ ಸೌಭಾಗ್ಯ. ಮೈಸೂರಿನಲ್ಲಿ ಮೋದಿ ಯುಗ ಉತ್ಸವ ಕಾರ್ಯಕ್ರಮ ನಡೆದಿದೆ. ಅದೇ ರೀತಿ ರಾಜ್ಯದ ಉದ್ದಗಲಕ್ಕೂ ಕಾರ್ಯಕ್ರಮ ಆಗಬೇಕು. ಯಡಿಯೂರಪ್ಪ ಒಬ್ಬನೇ ರಾಜ್ಯ ಪ್ರವಾಸ ಮಾಡುವ ಪರಿಸ್ಥಿತಿ ಬಂದಿಲ್ಲ. ಬಿಜೆಪಿಯ ಶಾಸಕರು, ಪರಿಷತ್ ಸದಸ್ಯರು, ಪದಾಧಿಕರಿಗಳು ಸೇರಿ ಪ್ರವಾಸ ಮಾಡಬೇಕು. ಬಿಜೆಪಿ ಯುವಮೋರ್ಚಾ ತಂಡ ನಮ್ಮ ಜೊತೆ ನಿಲ್ಲಬೇಕು. ಪಕ್ಷ ಸಂಘಟನೆಗಾಗಿ ಈಗಿನಿಂದಲೇ ಪ್ರವಾಸಗಳನ್ನು ಕೈಗೊಂಡು ಚುನಾವಣೆಗೆ ಸಿದ್ಧರಾಗಬೇಕು. 150 ಸ್ಥಾನಗಳನ್ನು ಪ್ರಾಮಾಣಿಕವಾಗಿ ಗೆಲ್ಲಬೇಕು ಎಂದು ಕರೆ ನೀಡಿದರು.
ಗ್ರಾಹಕನ ವಿಚ್ಛೇದಿತ ಪತ್ನಿಗೆ ಡೆಬಿಟ್ ಕಾರ್ಡ್ ಕಳುಹಿಸಿ ಪೇಚಿಗೆ ಸಿಲುಕಿದ ಬ್ಯಾಂಕ್…..!
ಈ ವರ್ಷ ಚುನಾವಣೆಗಳ ವರ್ಷ ಎಂದು ಪರಿಗಣಿಸಬೇಕು. ಉಪಚುನಾವಣೆಗಳನ್ನು ಗೆಲ್ಲದಿದ್ದರೆ ಯಾವ ಸಂದೇಶ ರವಾನೆಯಾಗುತ್ತೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಬಿ ಎಸ್ ವೈ ಪಾಠ ಮಾಡಿದರು.