ಸ್ಯಾಂಡಲ್ವುಡ್ ನಲ್ಲಿ ದಾಖಲೆ ಬರೆದ ‘ರಾಜಕುಮಾರ’ ಮತ್ತು ‘ಯುವರತ್ನ’ ನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ನಿರ್ದೇಶಕ ಸಂತೋಷ್ ಆನಂದರಾಮ್ ಹಾಗೂ ಹೊಂಬಾಳೆ ಫಿಲಮ್ಸ್ ಬ್ಯಾನರ್ ನಲ್ಲಿ ಮತ್ತೊಂದು ಚಿತ್ರ ನಿರ್ಮಾಣವಾಗಲಿದೆ ಎನ್ನಲಾಗಿತ್ತು.
‘ಯುವರತ್ನ’ ಬಿಡುಗಡೆಗೆ ಮೊದಲೇ ಪುನೀತ್ ರಾಜಕುಮಾರ್, ಹೊಂಬಾಳೆ ಫಿಲಮ್ಸ್ ಬ್ಯಾನರ್ ನಲ್ಲಿ ಹೊಸ ಚಿತ್ರ ನಿರ್ಮಾಣ ಮಾಡುವುದಾಗಿ ಸಂತೋಷ್ ಆನಂದರಾಮ್ ಹೇಳಿದ್ದರು. ಸದ್ಯ ಪುನೀತ್ ‘ಜೇಮ್ಸ್’, ‘ದ್ವಿತ್ವ’ ಚಿತ್ರಗಳಲ್ಲಿ ತೊಡಗಿದ್ದು, ಮುಂದಿನ ವರ್ಷದಿಂದ ಸಂತೋಷ್ ಆನಂದರಾಮ್ ಅವರೊಂದಿಗೆ ಹೊಸ ಚಿತ್ರ ಆರಂಭವಾಗಲಿದೆ.
ಮುಂದಿನ ವರ್ಷದಿಂದ ಪುನೀತ್ ರಾಜ್ ಮಾರ್ ಅವರೊಂದಿಗೆ ಹೊಸ ಚಿತ್ರ ಆರಂಭವಾಗಲಿದೆ. ಸದ್ಯದಲ್ಲೇ ಇನ್ನಷ್ಟು ಮಾಹಿತಿ ಕೊಡುವುದಾಗಿ ಸಂತೋಷ್ ಆನಂದರಾಮ್ ಹೇಳಿದ್ದಾರೆ.