ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಒಕಾಯಾ ಇವಿ ತನ್ನ ಲೇಟೆಸ್ಟ್ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಫ್ರೀಡಂ ಎಲೆಕ್ಟ್ರಿಕ್ ಸ್ಕೂಟರ್ ಹೆಸರಿನ ಈ ವಾಹನದ ಆರಂಭಿಕ ಬೆಲೆ 69,900 (ಎಕ್ಸ್‌ಶೋರೂಂ ಬೆಲೆ) ಇದೆ. ಜುಲೈ 2021ರಲ್ಲಿ ಮಾರುಕಟ್ಟೆ ಪ್ರವೇಶಿಸಿದಾಗಿನಿಂದ ಒಕಾಯಾ ಬಿಡುಗಡೆ ಮಾಡುತ್ತಿರುವ ಮೂರನೇ ಸ್ಕೂಟರ್ ಇದಾಗಿದೆ.
ಹಿಮಾಚಲ ಪ್ರದೇಶದ ಬಡ್ಡಿಯಲ್ಲಿ ಈ ಸ್ಕೂಟರ್ ಅನ್ನು ಉತ್ಪಾದನೆ ಮಾಡಲಾಗುತ್ತಿದೆ. ಲಿಥಿಯಂ-ಅಯಾನ್ ಹಾಗೂ ಸತು-ಕ್ಷಾರದ ಬ್ಯಾಟರಿಗಳ ಆಯ್ಕೆಯಲ್ಲಿ ಈ ಸ್ಕೂಟರ್‌ಗಳು ದೊರಕಲಿವೆ. 12 ವಿಭಿನ್ನ ಬಣ್ಣಗಳಲ್ಲಿ ಈ ಸ್ಕೂಟರ್ ಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ.
2023ಕ್ಕೆ 2 ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರಲಿವೆ; ದೇಶದಲ್ಲಿ ಇಂದು ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂಬುದು ತಿಳಿದಿದೆ; ಹೆಚ್.ಡಿ.ದೇವೇಗೌಡ ವಾಗ್ದಾಳಿ
ತನ್ನ 120 ಡೀಲರ್‌ಗಳ ಮೂಲಕ ದೇಶಾದ್ಯಂತ ಏವಿಯಾನ್ ಐಕ್ಯೂ ಹಾಗೂ ಕ್ಲಾಸಿಕ್ ಸೀರೀಸ್ ಸ್ಕೂಟರ್‌ಗಳನ್ನು ಈ ದೇಶೀ ಕಂಪನಿ ಮಾರಾಟ ಮಾಡುತ್ತಿದೆ.
“ಎಲೆಕ್ಟ್ರಿಕ್ ಸ್ಕೂಟರ್ ಭವಿಷ್ಯದ ವಾಹನವಾಗಿದ್ದು, ಉತ್ಕೃಷ್ಟ ಗುಣಮಟ್ಟ ಹಾಗೂ ದುಡ್ಡಿಗೆ ತಕ್ಕ ಮೌಲ್ಯವನ್ನು ಪ್ರತಿಯೊಬ್ಬ ಭಾರತೀಯನಿಗೂ ಒದಗಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಸಂಘಟಿತ ಉದ್ಯಮದ ಕಾರಣದಿಂದ ಮಾರುಕಟ್ಟೆಯಲ್ಲಿ ಅನುಕೂಲಕರ ಸ್ಥಿತಿಗತಿ ಕಾಪಾಡಿಕೊಂಡಿದ್ದೇವೆ. ನಮ್ಮ ಉತ್ಪನ್ನಗಳ ಗುಣಮಟ್ಟ ಹಾಗೂ ಬಾಳಿಕೆಯ ಬಗ್ಗೆ ನಮಗೆ ಗೊತ್ತಿರುವ ಕಾರಣ 2025ರ ವೇಳೆಗೆ ದೇಶದ ರಸ್ತೆಗಳಲ್ಲಿ ಒಂದು ಕೋಟಿಯಷ್ಟು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಡಬೇಕೆನ್ನುವ ಸರ್ಕಾರದ ಉದ್ದೇಶಕ್ಕೆ ಇಂಬು ನಿಡುವುದು ನಮ್ಮ ಆಶಯವಾಗಿದೆ” ಎಂದು ಒಕಾಯಾ ಪವರ್ ಸಮೂಹದ ಅನಿಲ್ ಗುಪ್ತಾ ತಿಳಿಸಿದ್ದಾರೆ.
ಒಂದು ಚಾರ್ಜ್‌ಗೆ 250 ಕಿಮೀ ಕ್ಷಮತೆ ಇರುವ ಸ್ಕೂಟರ್‌ಗಳನ್ನು ತರುವ ಗುರಿಯನ್ನು ಕಂಪನಿ ಹೊಂದಿದೆ. ಈಗಾಗಲೇ ಹತ್ತಾರು ಕಂಪನಿಗಳು ಎಲೆಕ್ಟ್ರಿಕ್ ವಾಹನ ಉತ್ಪಾದನೆ ಆರಂಭಿಸಿ ರಸ್ತೆಗಿಳಿಸುತ್ತಿದ್ದು, ಬೆಲೆಯಲ್ಲೂ ಪೈಪೋಟಿಯ ಲಕ್ಷಣ ಕಾಣಿಸಲಾರಂಭಿಸಿದೆ.