ಅನೇಕ ಮಹಿಳೆಯರು ನಿಯಮಿತವಾಗಿ ಹೇರ್ ಕಟ್ ಮಾಡಿಸ್ತಾರೆ. ಕೂದಲು, ಇದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮಹಿಳೆಯೊಬ್ಬಳು ಕೂದಲು ಕತ್ತರಿಸಿಕೊಂಡಿದ್ದಾಳೆ. ಇದಕ್ಕೆ 22 ಸಾವಿರ ರೂಪಾಯಿ ಖರ್ಚು ಮಾಡಿದ್ದಾಳೆ. ಆದ್ರೆ ಹೇರ್ ಕಟ್ ಆದ್ಮೇಲೆ ಕನ್ನಡಿಯಲ್ಲಿ ಮುಖ ನೋಡಿದವಳು, ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದ್ದಾಳೆ.
ಕೂದಲು ಕತ್ತರಿಸಲು ಆಕೆ 200 ಪೌಂಡ್ ಅಂದ್ರೆ ಸುಮಾರು 21,771 ರೂಪಾಯಿ ಖರ್ಚು ಮಾಡಿದ್ದಾಳೆ. ಇದ್ರ ನಂತ್ರ ಆಕೆ ಕನ್ನಡಿ ಮುಂದೆ ನಿಂತು ಅತ್ತಿದ್ದಾಳೆ. ಆದ್ರೆ ಈಕೆ ಯಾವ ದೇಶದ ಮಹಿಳೆ ಎಂಬುದು ಗೊತ್ತಾಗಿಲ್ಲ.
@icarlyreboot ನಲ್ಲಿ ಮಹಿಳೆ ವಿಡಿಯೋ ಹಂಚಿಕೊಂಡಿದ್ದಾಳೆ. ಇಷ್ಟು ಹಣ ಖರ್ಚು ಮಾಡಿಯೋ ನನ್ನ ಕೂದಲನ್ನು ಹೇಗೆ ಮಾಡಿದ್ದಾರೆ ನೋಡಿ ಎಂದು ಮಹಿಳೆ ನೋವು ಹಂಚಿಕೊಂಡಿದ್ದಾಳೆ. ಈ ಬಗ್ಗೆ ಸಲೂನ್ ಮ್ಯಾನೇಜರ್ ಜೊತೆಯೂ ಮಾತನಾಡಲು ಪ್ರಯತ್ನಿಸಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲವಂತೆ.
ಟಿಕ್ ಟಾಕ್ ನಲ್ಲಿಯೂ ಮಹಿಳೆಯ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನಾನೂ ಅಲ್ಲಿಗೆ ಹೋಗಿದ್ದೆ. ಸಲೂನ್ ಸಿಬ್ಬಂದಿ, 8 ಇಂಚು ಕೂದಲು ಕತ್ತರಿಸಿದ್ದಾರೆ. ನಾನು ಅಳ್ತಾ ಕೂತಿದ್ದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.