ಮುಂಬೈ: ಶ್ವಾನ ಮಾಲೀಕರೊಬ್ಬರು ತನ್ನ ಮುದ್ದು ನಾಯಿಗಾಗಿ ಏರ್ ಇಂಡಿಯಾ ವಿಮಾನದ ಸಂಪೂರ್ಣ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಅನ್ನು ಬುಕ್ ಮಾಡಿದ್ದಾರೆ. ನಾಯಿಯು ಮುಂಬೈನಿಂದ ಚೆನ್ನೈಗೆ ಐಷಾರಾಮಿಯಾಗಿ ಪ್ರಯಾಣಿಸಿದೆ.
ಮುಂಬೈನಿಂದ ಚೆನ್ನೈಗೆ ಎರಡು ಗಂಟೆಗಳ ಅವಧಿಯ ವಿಮಾನಕ್ಕಾಗಿ ಶ್ವಾನ ಮಾಲೀಕರು 2.5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಏರ್ ಇಂಡಿಯಾ ಮುಂಬೈ-ಚೆನ್ನೈ ಬಿಸಿನೆಸ್ ಕ್ಲಾಸ್ ಸೀಟಿನ ದರ ಸುಮಾರು 20,000 ರೂ.ಗಳಾಗಿವೆ. ಏರ್ ಇಂಡಿಯಾ ಎ 320 ವಿಮಾನದಲ್ಲಿ ಜೆ-ಕ್ಲಾಸ್ ಕ್ಯಾಬಿನ್ 12 ಆಸನಗಳನ್ನು ಹೊಂದಿದ್ದು, ಮುದ್ದಾದ ನಾಯಿ ಐಷಾರಾಮಿಯಾಗಿ ಪ್ರಯಾಣಿಸಿದೆ.
ಪ್ರೀತಿಸಿದ್ದಕ್ಕೆ ಯುವಕನಿಗೆ ಬೆಂಕಿ ಹಚ್ಚಿದ ಯುವತಿ ಕುಟುಂಬಸ್ಥರು: ಮಧ್ಯಪ್ರದೇಶದಲ್ಲಿ ನಡೆಯಿತು ಘೋರ ದುರಂತ
ಈ ಹಿಂದೆ ನಾಯಿಗಳು ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿದ್ದವು. ಆದರೆ ಸಾಕುಪ್ರಾಣಿಗಾಗಿ ವಿಮಾನದ ಇಡಿ ಬ್ಯುಸಿನೆಸ್ ಕ್ಯಾಬಿನ್ ಅನ್ನು ಬುಕ್ ಮಾಡಿರುವುದು ಬಹುಶಃ ಇದೇ ಮೊದಲು ಎಂದು ಹೇಳಲಾಗಿದೆ.
ಇನ್ನು ಪ್ರಯಾಣಿಕರ ಕ್ಯಾಬಿನ್ನಲ್ಲಿ ಸಾಕುಪ್ರಾಣಿಗಳನ್ನು ಅನುಮತಿಸುವ ಏಕೈಕ ಭಾರತೀಯ ವಿಮಾನಯಾನ ಸಂಸ್ಥೆ ಅದು ಏರ್ ಇಂಡಿಯಾ ಮಾತ್ರ. ವಿಮಾನದಲ್ಲಿ ಗರಿಷ್ಠ ಎರಡು ಸಾಕುಪ್ರಾಣಿಗಳನ್ನು ಅನುಮತಿಸಲಾಗುತ್ತದೆ. ಮುಂಗಡವನ್ನು ಬುಕ್ ಮಾಡಿದ ವರ್ಗದ ಕೊನೆಯ ಸಾಲಿನಲ್ಲಿ ಶ್ವಾನಗಳನ್ನು ಕೂರಿಸಲಾಗುತ್ತದೆ.