alex Certify ಭಾರತದಲ್ಲಿ ಘಟಕ ಬಂದ್​ ಘೋಷಣೆ ನಡುವೆಯೂ ಚೆನ್ನೈನಲ್ಲಿ ಉತ್ಪಾದನೆ ಪುನಾರಂಭಿಸಿದ ಫೋರ್ಡ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಘಟಕ ಬಂದ್​ ಘೋಷಣೆ ನಡುವೆಯೂ ಚೆನ್ನೈನಲ್ಲಿ ಉತ್ಪಾದನೆ ಪುನಾರಂಭಿಸಿದ ಫೋರ್ಡ್​

Ford India's Chennai workers get back to work, restart EcoSport production  for exports | Automobiles News | Zee Newsಕೆಲಸವನ್ನು ಕಳೆದುಕೊಂಡ ನೋವು ಮುಖದಲ್ಲಿ ಇದ್ದರೂ ಸಹ ಫೋರ್ಡ್​ ಇಂಡಿಯಾದ ಚೆನ್ನೈ ಘಟಕದ ಕಾರ್ಮಿಕರು ಇಕೋಸ್ಪೋರ್ಟ್​ ಉತ್ಪಾದನೆಯನ್ನು ಪುನಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.‌

ಫೋರ್ಡ್​ ಇಂಡಿಯಾ ಕಂಪನಿಯು ಈಗಾಗಲೇ ಒಪ್ಪಿಕೊಂಡಂತೆ ರಫ್ತು ಮಾಡಲು 30 ಸಾವಿರ ಕಾರುಗಳನ್ನು ಉತ್ಪಾದನೆ ಮಾಡಬೇಕಾದ ಬದ್ಧತೆಯನ್ನು ಹೊಂದಿದ್ದು, ಈ ವರ್ಷದ ಅಂತ್ಯದೊಳಗೆ ಇದನ್ನು ಪೂರೈಸಬೇಕಿದೆ.

ಚೆನ್ನೈ ಕಾರ್ಖಾನೆಯಲ್ಲಿ ವೇಳಾಪಟ್ಟಿಗೆ ತಕ್ಕಂತೆ ಉತ್ಪಾದನಾ ಕಾರ್ಯ ನಡೆಯುತ್ತಿದೆ ಎಂದು ಕಾರ್ಮಿಕ ಸಂಘದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಂಪನಿಯು ಈ ವರ್ಷದ ಒಳಗಾಗಿ 30 ಸಾವಿರ ಕಾರುಗಳನ್ನು ಉತ್ಪಾದನೆ ಮಾಡಬೇಕಿದೆ. ಈಗಾಗಲೇ ಭಾರತದಲ್ಲಿ ತನ್ನ ಕಾರು ಉತ್ಪಾದನೆಯನ್ನು ಬಂದ್​ ಮಾಡಿರುವ ಬಗ್ಗೆ ಘೋಷಣೆ ಮಾಡಿರುವ ಫೋರ್ಡ್ ನಿಗದಿತ ಅವಧಿಯಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಲು ಕಾರ್ಮಿಕರ ಮನವೊಲಿಸಿದೆ.

ಗಣೇಶ ಚತುರ್ಥಿಯ ಮುನ್ನಾದಿನ ಫೋರ್ಡ್ ಕಂಪನಿಯು ಭಾರತದಲ್ಲಿರುವ ಘಟಕಗಳನ್ನು ಬಂದ್​ ಮಾಡುತ್ತಿರುವುದರ ಬಗ್ಗೆ ಘೋಷಣೆ ಮಾಡಿತ್ತು. ಗುಜರಾತ್​ನ ಸನಂದ್​ನಲ್ಲಿರುವ ವಾಹನ ಉತ್ಪಾದನಾ ಘಟಕವನ್ನು ಈ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಮುಚ್ಚುವುದಾಗಿ ಹೇಳಿದೆ. ಹಾಗೂ ಚೆನ್ನೈನ ಎಂಜಿನ್ ಉತ್ಪಾದನಾ ಘಟಕವನ್ನು 2022ರ ಎರಡನೇ ತ್ರೈಮಾಸಿಕದಲ್ಲಿ ಮುಚ್ಚುವುದಾಗಿ ಘೋಷಣೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...