ಮಕ್ಕಳು ಮಾಡುವ ಯಡವಟ್ಟುಗಳು ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೊಸ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗುವ ಅನೇಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಲಂಡನ್ ನಲ್ಲಿ 15 ವರ್ಷದ ಹುಡುಗನೊಬ್ಬ ವಿಚಿತ್ರ ಪ್ರಯೋಗಕ್ಕೆ ಮುಂದಾಗಿ ಆಸ್ಪತ್ರೆ ಸೇರಿದ್ದಾನೆ. ಹುಡುಗನ ಖಾಸಗಿ ಅಂಗದಲ್ಲಿ ಯುಎಸ್ಬಿ ಕೇಬಲ್ ಸಿಕ್ಕಿ ಬಿದ್ದಿತ್ತು.
ಹುಡುಗ, ತನ್ನ ಖಾಸಗಿ ಅಂಗದ ಉದ್ದ ನೋಡಲು, ಯುಎಸ್ಬಿ ಕೇಬಲ್ ಬಳಸಿದ್ದನಂತೆ. ಯುಎಸ್ಬಿ ಕೇಬಲ್ ನ ಎರಡೂ ತುದಿ, ಖಾಸಗಿ ಅಂಗದೊಳಗೆ ಹೋಗಿತ್ತಂತೆ. ಹುಡುಗ ಅದನ್ನು ತೆಗೆಯುವ ಪ್ರಯತ್ನ ನಡೆಸಿದ್ದಾನೆ. ಆದ್ರೆ ಮೂತ್ರದಲ್ಲಿ ರಕ್ತ ಬರಲು ಶುರುವಾಗಿದೆ. ಹೆದರಿದ ಪಾಲಕರು, ಹುಡುಗನನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ. ವೈದ್ಯರು, ಯುಎಸ್ಬಿ ಕೇಬಲ್ ತೆಗೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದ್ರೆ ವಿಶೇಷ ಉಪಕರಣಗಳಿಂದಲೂ ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ.
ಎಕ್ಸ್ ರೇ ಮೂಲಕ, ಯುಎಸ್ಬಿ ಕೇಬಲ್ ಉದ್ದವನ್ನು ನೋಡಲಾಗಿದೆ. ನಂತ್ರ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ತೆಗೆಯಲಾಗಿದೆ. ಹುಡುಗ ಆರೋಗ್ಯವಾಗಿದ್ದಾನೆ. ಆದ್ರೆ ನಿರಂತರ ಪರೀಕ್ಷೆಯ ಅವಶ್ಯಕತೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಖಾಸಗಿ ಅಂಗದಲ್ಲಿ ಯುಎಸ್ಬಿ ಕೇಬಲ್ ಗಳು ಸಿಕ್ಕಿಬಿದ್ದಲ್ಲಿ ಅನೇಕ ತೊಂದರೆಗಳಾಗುತ್ತವೆ. ಹೆಚ್ಚು ರಕ್ತಸ್ರಾವ, ನೋವು ಸೇರಿದಂತೆ ಅನೇಕ ಸಮಸ್ಯೆ ಕಾಡಲಿದ್ದು, ಇದಕ್ಕೆ ಶಸ್ತ್ರಚಿಕಿತ್ಸೆಯೊಂದೇ ದಾರಿ ಎಂದು ವೈದ್ಯರು ಹೇಳಿದ್ದಾರೆ.