ಕಿರುತೆರೆ ಹಾಗೂ ಸಿನಿಮಾ ನಟಿ – ನಿರ್ದೇಶಕಿ ರೇಣುಕಾ ಶಹಾನೆ ʼಕ್ರೈಂ ಪ್ಯಾಟ್ರೋಲ್ ಸತರ್ಕ್: ಗುಮ್ರಾ ಬಚಪನ್ʼ ಕಾರ್ಯಕ್ರಮದ ನಿರೂಪಣೆ ಮಾಡ್ತಾರೆ ಅನ್ನೋದು ಎಲ್ರಿಗೂ ತಿಳಿದಿರುವ ವಿಚಾರ. ಆದರೆ ಈ ಕಾರ್ಯಕ್ರಮವನ್ನು ನಡೆಸುವ ಅಸಲಿ ಉದ್ದೇಶವನ್ನು ರೇಣುಕಾ ಶಹಾನೆ ಬಹಿರಂಗಪಡಿಸಿದ್ದಾರೆ.
ಮಕ್ಕಳಲ್ಲಿ ಅಪರಾಧದ ಮನೋಭಾವನೆ ಶುರುವಾಗುತ್ತಿದ್ದರೆ ಆ ಲಕ್ಷಣಗಳನ್ನು ಗಮನಿಸಲು ಪೋಷಕರಿಗೆ ಎಚ್ಚರಿಕೆ ನೀಡುವ ಸಲುವಾಗಿ ಈ ಕಾರ್ಯಕ್ರಮ ನಡೆಸಲಾಗ್ತಿದೆ ಎಂದು ಅವರು ಹೇಳಿದ್ರು.
ಒಬ್ಬ ನಿರೂಪಕಿಯಾಗಿ ಹಾಗೂ ಇಬ್ಬರು ಮಕ್ಕಳ ತಾಯಿಯಾಗಿ ಈ ಕಾರ್ಯಕ್ರಮ ನಡೆಸುವುದರ ಹಿಂದಿನ ಉದ್ದೇಶ ಏನೆಂದರೆ ಯುವಜನತೆಯ ತಲೆಯಲ್ಲಿ ಏನು ಓಡುತ್ತಿದೆ ಅನ್ನೋದು ಪೋಷಕರಿಗೆ ತಿಳಿಯಬೇಕು ಹಾಗೂ ಸರಿಯಾದ ಸಮಯಕ್ಕೆ ಪೋಚಕರು ಎಚ್ಚೆತ್ತುಕೊಳ್ಳಲು ಸಹಾಯವಾಗಲಿ ಎಂಬುದು ಎಂದು ಹೇಳಿದ್ದಾರೆ.
ಪ್ರತಿಯೊಂದು ಎಪಿಸೋಡ್ಗಳೂ ಸಹ ಪೋಷಕರಿಗೆ ಮಕ್ಕಳಲ್ಲಿ ಜಾಗ್ರತವಾಗುತ್ತಿರುವ ಅಪರಾಧದ ಬುದ್ಧಿಯನ್ನು ಕಂಡುಹಿಡಿಯುವುದು ಹಾಗೂ ಮಕ್ಕಳು ಅಪರಾಧ ಕೃತ್ಯವನ್ನು ಎಸಗುವುದಕ್ಕೂ ಮುನ್ನ ಅದನ್ನು ತಡೆಯವುದಕ್ಕೆ ಸಹಾಯವಾಗಿ ಎಂಬ ಗುರಿಯನ್ನು ಹೊಂದಿದೆ ಎಂದು ರೇಣುಕಾ ಹೇಳಿದ್ದಾರೆ.