alex Certify ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಈ ಸಮಯದಲ್ಲಿ ಓಡಾಡಲಿದೆ ʼನಮ್ಮ ಮೆಟ್ರೋʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಈ ಸಮಯದಲ್ಲಿ ಓಡಾಡಲಿದೆ ʼನಮ್ಮ ಮೆಟ್ರೋʼ

ಇಂದಿನಿಂದ ಜಾರಿಗೆ ಬರುವಂತೆ ಬಿಎಂಆರ್​ಸಿಎಲ್​ ತನ್ನ ಮೆಟ್ರೋ ಸಂಚಾರದ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಅಲ್ಲದೇ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವ ವೇಳೆ ಕೋವಿಡ್​ 19 ನಿಬಂಧನೆಗಳನ್ನು ಪಾಲಿಸುವಂತೆಯೂ ಒತ್ತಾಯಿಸಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮೆಟ್ರೋ ರೈಲುಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚರಿಸಲಿದೆ ಎಂದು ಬಿಎಂಆರ್​ಸಿಎಲ್​ ಅಧಿಕೃತ ಮಾಹಿತಿ ನೀಡಿದೆ. ಇದರ ಪ್ರಕಾರ ದಿನದ ಕೊನೆಯ ಮೆಟ್ರೋ ರೈಲುಗಳು ರಾತ್ರಿ 9:30ಕ್ಕೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಹಾಗೂ ಸಿಲ್ಕ್​ ಇನ್​ಸ್ಟಿಟ್ಯೂಟ್ ಟರ್ಮಿನಲ್​ನಿಂದ ಹೊರಡಲಿದೆ.

ಕೋವಿಡ್​ 19 ಕೇಸುಗಳು ಶುರುವಾದಾಗಿನಿಂದ ಮೆಟ್ರೋ ರೈಲುಗಳು ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಸಂಚಾರ ಮಾಡುತ್ತಿದ್ದವು.

ಬಿಎಂಆರ್​ಸಿಎಲ್​ ನೀಡಿರುವ ಮಾಹಿತಿಯ ಪ್ರಕಾರ ವಾರದ ದಿನಗಳಲ್ಲಿ ಜನಸಂದಣಿ ಹೆಚ್ಚಾಗುವ ಸಮಯಗಳಲ್ಲಿ ಮೆಟ್ರೋ ರೈಲಿನ ನಡುವಿನ ಅಂತರ 5 ನಿಮಿಷ ಇರಲಿದೆ. ಹಾಗೂ ಜನಸಂದಣಿ ಇಲ್ಲದ ಸಮಯದಲ್ಲಿ 10 ನಿಮಿಷಗಳ ಅಂತರದಲ್ಲಿ ಬೈಯಪ್ಪನಹಳ್ಳಿ – ಮೈಸೂರು ರಸ್ತೆಯ ನಡುವೆ ಹಾಗೂ ಹಸಿರು ಮಾರ್ಗದ ಯಲಚೇನಹಳ್ಳಿ ನಿಲ್ದಾಣಗಳ ನಡುವೆ ಮೆಟ್ರೋ ಓಡಾಡಲಿದೆ ಎಂದು ತಿಳಿಸಿದೆ.

ಸಿಲ್ಕ್​ ಇನ್​ಸ್ಟಿಟ್ಯೂಟ್​ನಿಂದ ಕೆಂಗೇರಿ ನಿಲ್ದಾಣದಲ್ಲಿ ಮೆಟ್ರೋ ರೈಲು ಸಂಚಾರದ ನಡುವಿನ ಅಂತರವು 10 ನಿಮಿಷ ಇರಲಿದೆ. ಶನಿವಾರ ಹಾಗೂ ಭಾನುವಾರ ರೈಲು ಸಂಚಾರದ ಅವಧಿಯಲ್ಲಿ ಕೊಂಚ ಬದಲಾವಣೆ ಉಂಟಾಗಬಹುದು ಎಂದು ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...