ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರ ಸಂಬಳದಲ್ಲಿ ಕಡಿತವಾಗಿದೆ. ಈ ಸಂದರ್ಭದಲ್ಲಿ ಜನರು ಇರುವ ಕೆಲಸದ ಜೊತೆ ಪಾರ್ಟ್ ಟೈಂ ಕೆಲಸ ಹುಡುಕುತ್ತಿದ್ದಾರೆ. ನೀವೂ ಅಂತವರಲ್ಲಿ ಒಬ್ಬರಾಗಿದ್ದರೆ, ಹಣ ಗಳಿಸಲು ಅವಕಾಶವಿದೆ.
ಅಮೆಜಾನ್, ಪಾರ್ಟ್ ಟೈಂ ಕೆಲಸ ನೀಡ್ತಿದೆ. ದಿನದಲ್ಲಿ 9 ಗಂಟೆ ನೀವು ಕೆಲಸ ಮಾಡ್ಬೇಕಾಗಿಲ್ಲ. ದಿನದಲ್ಲಿ 4 ಗಂಟೆ ಕೆಲಸ ಮಾಡಿದ್ರೆ ಸಾಕು. ಅಮೆಜಾನ್, ಡೆಲಿವರಿ ಬಾಯ್ ಕೆಲಸ ನೀಡ್ತಿದೆ. ಅಮೆಜಾನ್ನ ಗೋದಾಮಿನಿಂದ ಪ್ಯಾಕೇಜನ್ನು ಗ್ರಾಹಕರಿಗೆ ಅಥವಾ ಅಮೆಜಾನ್ ಮೀಟಿಂಗ್ ಪಾಯಿಂಟ್ಗೆ ತಲುಪಿಸುವ ಕೆಲಸ ಮಾಡಬೇಕಾಗುತ್ತದೆ. ಅಮೆಜಾನ್ಗೆ ದೇಶದಾದ್ಯಂತ ಡೆಲಿವರಿ ಬಾಯ್ಸ್ ಅಗತ್ಯವಿದೆ.
ದೇಶದಲ್ಲಿ ಆನ್ಲೈನ್ ವ್ಯಾಪಾರ ಹೆಚ್ಚುತ್ತಿರುವುದ್ರಿಂದ, ಡೆಲಿವರಿ ಬಾಯ್ಗೆ ಬೇಡಿಕೆ ಹೆಚ್ಚುತ್ತಿದೆ. ಡೆಲಿವರಿ ಬಾಯ್ ಒಂದು ದಿನದಲ್ಲಿ 40 ರಿಂದ 50 ಪ್ಯಾಕೆಟ್ ತಲುಪಿಸಬೇಕು. ಪ್ರಯಾಣದ ಮಿತಿ ಕೇವಲ 10-15 ಕಿಲೋಮೀಟರ್ ಒಳಗಿರುತ್ತದೆ.
ಎಷ್ಟು ಪ್ಯಾಕೇಜ್ಗಳನ್ನು ತಲುಪಿಸುತ್ತೀರಿ ಎಂಬುದರ ಮೇಲೆ ಕೆಲಸದ ಸಮಯ ಅವಲಂಬಿತವಾಗಿರುತ್ತದೆ. ಅಮೆಜಾನ್ ಗ್ರಾಹಕರಿಗೆ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಡಿಲೆವರಿ ನೀಡುತ್ತದೆ. ದೆಹಲಿಯ ಡೆಲಿವರಿ ಬಾಯ್ಸ್, 40-50 ಪ್ಯಾಕೆಟ್ಗಳನ್ನು ದಿನಕ್ಕೆ 4 ಗಂಟೆಗಳಲ್ಲಿ ತಲುಪಿಸುತ್ತಾರೆ. ಅಮೆಜಾನ್ ಕೆಲಸದ ಮೊದಲು, ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಇದರ ಜೊತೆ ತರಬೇತಿಯನ್ನೂ ನೀಡುತ್ತದೆ.
ಅರೆಕಾಲಿಕ ಮತ್ತು ಪೂರ್ಣ ಸಮಯದ ಉದ್ಯೋಗವನ್ನು ಹುಡುಕುತ್ತಿದ್ದರೆ,https://logistics.amazon.in/applynow ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಡೆಲಿವರಿ ಬಾಯ್ ಆಗಬಯಸುವ ಅಭ್ಯರ್ಥಿಗಳು ಡಿಗ್ರಿ ಪೂರ್ಣಗೊಳಿಸಿರಬೇಕು. ಶಾಲೆ ಪ್ರಮಾಣ ಪತ್ರ ಹೊಂದಿರಬೇಕು. ಸ್ವಂತ ಬೈಕ್ ಅಥವಾ ಸ್ಕೂಟರ್ ಹೊಂದಿರಬೇಕು. ಬೈಕ್ ಅಥವಾ ಸ್ಕೂಟರ್ ವಿಮೆ, ಆರ್ಸಿ ಮಾನ್ಯವಾಗಿರಬೇಕು. ಅರ್ಜಿದಾರರು ಚಾಲನಾ ಪರವಾನಗಿಯನ್ನು ಹೊಂದಿರಬೇಕು.
ಡೆಲಿವರಿ ಬಾಯ್, ತಿಂಗಳಿಗೆ 12000 ರಿಂದ 15000 ರೂಪಾಯಿಗಳನ್ನು ಗಳಿಸುತ್ತಾನೆ. ಇದಲ್ಲದೇ, ಪ್ರತಿ ಪ್ಯಾಕೇಜ್ ಡೆಲಿವರಿಗೆ 10 ರಿಂದ 15 ರೂಪಾಯಿ ಸಿಗುತ್ತವೆ. ತಿಂಗಳ ಪೂರ್ತಿ ಕೆಲಸ ಮಾಡಿ, ಪ್ರತಿದಿನ 50 ಪ್ಯಾಕೆಟ್ಗಳನ್ನು ಡಿಲೆವರಿ ಮಾಡಿದ್ರೆ ಅವರಿಗೆ ತಿಂಗಳಿಗೆ 25 ರಿಂದ 30 ಸಾವಿರ ರೂಪಾಯಿ ಸಿಗುತ್ತದೆ.