ಸೀ ಫುಡ್ (ಸಮುದ್ರಾಹಾರ) ಕಂಪನಿಯು ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದೆ. ಉದ್ಯೋಗಿ ತನ್ನ ಕೆಲಸಕ್ಕೆ ಹಾಜರಾಗುವ 9 ಗಂಟೆಗಳ ಮೊದಲು ಬಿಯರ್ ಕುಡಿದಿದ್ದಕ್ಕಾಗಿ ಕಂಪನಿ ಈ ಕ್ರಮ ತೆಗೆದುಕೊಂಡಿದೆ. ಇದಕ್ಕಾಗಿ ಕಂಪನಿಗೂ ಹೊಡೆತ ಬಿದ್ದಿದ್ದು, ದೊಡ್ಡ ಮೊತ್ತದ ಪರಿಹಾರ ಕೊಡಬೇಕಾಗಿ ಬಂದಿದೆ.
ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್ ಬಳಿಯ ಲಿವಿಂಗ್‌ಸ್ಟನ್‌ನಲ್ಲಿರುವ ಯಂಗ್ಸ್ ಸೀಫುಡ್ ಕಾರ್ಖಾನೆಯಲ್ಲಿ ತನ್ನ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ ನಂತರ ಮಾಲ್ಗೊರ್ಜಾಟಾ ಕ್ರೋಲಿಕ್ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. ಆಕೆ ಮೂರು ಬಿಯರ್‌ಗಳನ್ನು ಬೆಳಿಗ್ಗೆ 5 ಗಂಟೆಗೆ ಕುಡಿದಿದ್ದಳಂತೆ. ಮಧ್ಯಾಹ್ನ 2 ಗಂಟೆಗೆ ತನ್ನ ಶಿಫ್ಟ್ ಪ್ರಾರಂಭವಾಗುವ ಒಂಭತ್ತು ಗಂಟೆಗಳ ಮೊದಲು ಬಿಯರ್ ಕುಡಿದಿದ್ದಾಳೆ.
ಆಲ್ಕೋಹಾಲ್ ವಿಚಾರದಲ್ಲಿ ‘ಶೂನ್ಯ ಸಹಿಷ್ಣುತೆ’ ನಿಯಮವನ್ನು ಹೊಂದಿರುವುದಾಗಿ ಕಂಪನಿಯು ಹೇಳಿದೆ. ಹೀಗಾಗಿ ಕ್ರೊಲಿಕ್ ಅನ್ನು ಸೇವೆಯಿಂದ ವಜಾಗೊಳಿಸಿತು. ಯಾಕೆಂದರೆ ನೌಕರರು ತಮ್ಮ ಶಿಫ್ಟ್ ನ ಒಂದೇ ದಿನದಲ್ಲಿ ಕುಡಿಯಲು ಅವಕಾಶವಿರಲಿಲ್ಲ.
ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಕ್ರೋಲಿಕ್ ಪರವಾಗಿ ಮಾತನಾಡಿದ ಕೋರ್ಟ್, ಆಕೆಯನ್ನು ಅನ್ಯಾಯವಾಗಿ ವಜಾಗೊಳಿಸಲಾಗಿದೆ ಎಂದು ಹೇಳಿದೆ. ಹೀಗಾಗಿ ಕಂಪನಿ ಕ್ರೋಲಿಕ್ ಗೆ 5454 ಪೌಂಡ್ ಅಂದರೆ ಸುಮಾರು 5.5 ಲಕ್ಷ ರೂ. ಹಣವನ್ನು ಪರಿಹಾರ ನೀಡುವಂತೆ ಆದೇಶಿಸಿತು.