ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಲಾವಿದೆ ಪ್ರಿಯಾಂಕಾ ಸಹಾನಿ ಎಂಬವರು ಆಹಾರ ಧಾನ್ಯಗಳನ್ನು ಬಳಸಿ ಮೋದಿಯ ಎಂಟು ಅಡಿ ಉದ್ದದ ಭಾವಚಿತ್ರ ರಚಿಸಿದ್ದಾರೆ.
ಈ ಭಾವಚಿತ್ರವು ಪ್ರಧಾನಿ ಮೋದಿ ಅವರಿಗೆ ಒಡಿಶಾ ಜನರು ನೀಡುವ ಉಡುಗೊರೆಯಾಗಿದೆ ಎಂದು ಪ್ರಿಯಾಂಕಾ ಸಹಾನಿ ತಿಳಿಸಿದ್ದಾರೆ. “ನಾನು ಒಡಿಶಾದ ಸಾಂಪ್ರದಾಯಿಕ ಪಟ್ಟಚಿತ್ರ ಕಲಾ ವಿನ್ಯಾಸವನ್ನು ಈ ಭಾವಚಿತ್ರದಲ್ಲಿ ಅಳವಡಿಸಿದ್ದೇನೆ. ಪ್ರಧಾನಮಂತ್ರಿಯವರ 71ನೇ ಹುಟ್ಟುಹಬ್ಬದಂದು ಒಡಿಶಾದ ಜನರು ಪ್ರಧಾನಿ ಅವರಿಗೆ ಗೌರವ ಸಲ್ಲಿಸಲು ಇದು ಒಂದು ವಿಧಾನವಾಗಿದೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.
BIG NEWS: ಆನ್ ಲೈನ್ ಜೂಜು, ಬೆಟ್ಟಿಂಗ್ ಮಾಡುವವರಿಗೆ ಜೈಲುಶಿಕ್ಷೆ; ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಮಂಡನೆ
ಪ್ರಧಾನ ಮಂತ್ರಿಯವರ ಹೃದಯದಲ್ಲಿ ದೇಶದ ಭೂಪಟವನ್ನು ಬಿಡಿಸಿರುವ ಸಹಾನಿ, ನಮ್ಮ ಹೃದಯವು ನಮ್ಮ ಹೃದಯದಲ್ಲಿ ವಾಸಿಸುವಂತೆಯೇ ನಮ್ಮ ದೇಶವು ಪ್ರಧಾನಿ ಹೃದಯದಲ್ಲಿ ಇರುತ್ತದೆ ಎಂಬುದನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದ್ದಾರೆ.
ಎಂಟು ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲದ ಭಾವಚಿತ್ರವನ್ನು ಮಾಡಲು ಸಹಾನಿ ಐದರಿಂದ ಆರು ಬಗೆಯ ಧಾನ್ಯಗಳನ್ನು ಬಳಸಿದ್ದಾರೆ. ಅದರಲ್ಲಿ ಅಕ್ಕಿ ಮತ್ತು ವಿವಿಧ ದ್ವಿದಳ ಧಾನ್ಯಗಳು ಸೇರಿವೆ. ಈ ಭಾವಚಿತ್ರವನ್ನು ಮಾಡಲು ಸುಮಾರು 25 ಗಂಟೆಗಳ ಸಮಯ ತೆಗೆದುಕೊಂಡಿರುವುದಾಗಿ ಕಲಾವಿದೆ ಹೇಳಿದ್ದಾರೆ.