ಹಿಂದೂ ಸಂಪ್ರದಾಯದ ಮದುವೆ ಅಂದರೆ ಅಲ್ಲಿ ಶಾಸ್ತ್ರಗಳು ಹಾಗೂ ಸಂಭ್ರಮಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನೃತ್ಯವಿಲ್ಲದೇ ಯಾವುದೇ ಮದುವೆಗಳು ಪೂರ್ಣವಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಮೊದಲೆಲ್ಲ ಮನೆ ಮಂದಿಯೆಲ್ಲ ನೃತ್ಯ ಮಾಡುತ್ತಿದ್ದರೂ ನವಜೋಡಿ ಮಾತ್ರ ನಾಚಿಕೆಯಿಂದ ತಲೆತಗ್ಗಿಸಿ ನಿಲ್ಲುತ್ತಿತ್ತು. ಆದರೆ ಈಗ ಹಾಗಲ್ಲ. ಕಾಲ ಬದಲಾಗಿದೆ. ಈ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದರಲ್ಲಿ ನೂತನ ವಧು ವರ ನಡುರಸ್ತೆಯಲ್ಲಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸಾಮಾನ್ಯವಾಗಿ ಫನ್ನಿ ಮದುವೆ ವಿಡಿಯೋಗಳನ್ನು ಶೇರ್ ಮಾಡುವ ನಿರಂಜನ್ ಎಂಬವರು ಈ ವಿಡಿಯೋವನ್ನೂ ಶೇರ್ ಮಾಡಿದ್ದಾರೆ. ನಿಮ್ಮ ನಿಮ್ಮ ಮದುವೆಗಳಲ್ಲಿ ಯಾರ್ಯಾರು ಈ ರೀತಿ ಕುಣಿದಿದ್ದೀರಿ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ತಮ್ಮ ಜೀವನದ ಅತೀ ಖುಷಿಯ ಕ್ಷಣವನ್ನು ಈ ರೀತಿ ಎಂಜಾಯ್ ಮಾಡಿದ್ದನ್ನು ಕಂಡು ನೆಟ್ಟಿಗರೂ ಸಹ ಫುಲ್ ಖುಶ್ ಆಗಿದ್ದಾರೆ.
https://www.instagram.com/p/CT2D6K2lLDt/?utm_source=ig_embed&utm_campaign=embed_video_watch_again