ಪ್ರಯಾಣ ಪ್ರಿಯರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ಲಸಿಕೆ ಹಾಕಿಸಿಕೊಂಡಿದ್ದೀರಾ ? ಹಾಗಿದ್ದಲ್ಲಿ ಅನೇಕ ಹೊರ ದೇಶಗಳು ಲಸಿಕೆ ಹಾಕಿಸಿಕೊಂಡ ಭಾರತೀಯರಿಗೆ ಬಾಗಿಲು ತೆಗೆದಿದೆ.
ಲಸಿಕೆ ಹಾಕಿಸಿಕೊಂಡರೆ ಸಾಕು, ಈ ದೇಶಗಳಲ್ಲಿ ಕ್ವಾರಂಟೈನ್ ಆಗುವುದೇ ಬೇಕಿಲ್ಲ. ಕೆಲವು ದೇಶಗಳಲ್ಲಿ ಎರಡು ಡೋಸ್ ಆಗಿರಬೇಕೆಂದು ಕೇಳುತ್ತದೆ, ಕೆಲವು ದೇಶಗಳಲ್ಲಿ ಒಂದೇ ಡೋಸ್ ಸಾಕು, ಆದರೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದೆ.
ಯಾವ ಯಾವ ದೇಶಗಳು ಅಂತ ನೋಡೋಣ ಬನ್ನಿ
ಟರ್ಕಿ : ಇಲ್ಲಿ ಲಸಿಕೆ ಹಾಕಿಸಿಕೊಂಡ ಭಾರತೀಯರಿಗೆ ಕ್ವಾರಂಟೈನ್ ಇರುವುದಿಲ್ಲ. ಇಲ್ಲಿಗೆ ಪ್ರಯಾಣಿಸುವವರು ಎರಡು ಡೋಸ್ ಹಾಕಿಸಿಕೊಂಡ ಲಸಿಕೆ ಪತ್ರ ತೋರಿಸಬೇಕು ಹಾಗು ಎರಡನೇ ಡೋಸ್ ಹಾಕಿಸಿಕೊಂಡು ಕನಿಷ್ಠ ಹದಿನಾಲ್ಕು ದಿನಗಳಾದರೂ ಆಗಿರಬೇಕು ಎಂದು ತಿಳಿಸಿದೆ.
ಐರ್ಲ್ಯಾಂಡ್:
ಸಂಪೂರ್ಣ ಲಸಿಕೆ ಪಡೆದುಕೊಂಡ ಭಾರತೀಯರು ಐರ್ಲ್ಯಾಂಡ್ ದೇಶಕ್ಕೆ ಹೋಗಿ ಎಂಟ್ರಿ ವೀಸಾಗೆ ಅರ್ಜಿ ಹಾಕಬಹುದು. ಇಲ್ಲೂ ಕೂಡ ಕ್ವಾರಂಟೈನ್ ಆಗುವ ಭಯ ಇಲ್ಲ. ಲಸಿಕೆ ಪತ್ರ ತೋರಿಸಿದಲ್ಲಿ ಕೋವಿಡ್ ಪರೀಕ್ಷೆ ಮತ್ತು ಕ್ವಾರಂಟೈನ್ ಎರಡರಿಂದಲೂ ವಿನಾಯಿತಿ ಪಡೆಯಬಹುದು.
ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಗಣ್ಯರ ಶುಭಾಶಯ: ಬಿಜೆಪಿಯಿಂದ ಸೇವಾ ಕಾರ್ಯ
ಆಸ್ಟ್ರಿಯ:
ಇಲ್ಲೂ ಕೂಡ ಎರಡು ಲಸಿಕೆ ಹಾಕಿಸಿಕೊಂಡಲ್ಲಿ ಚಿಂತೆಯಿಲ್ಲದೆ ಈ ದೇಶಕ್ಕೆ ಭಾರತೀಯರು ಪ್ರಯಾಣಿಸಬಹುದು. ಇಲ್ಲೂ ಕೂಡ ವಿಮಾನದಲ್ಲಿ ಇಳಿದ ಮೇಲೆ ಪ್ರತ್ಯೇಕವಾಗಿ ಇರುವ ಅವಶ್ಯಕತೆ ಇರುವುದಿಲ್ಲ. ಎರಡನೇ ಡೋಸ್ ಹಾಕಿಸಿಕೊಂಡ ನಂತರ ಕನಿಷ್ಠ ಹದಿನಾಲ್ಕು ದಿನವಾದರೂ ಆಗಿರಬೇಕು ಎಂದು ಇಲ್ಲೂ ಕೂಡ ಹೇಳಿದೆ.
ಅಬುದಾಬಿ:
ಇಲ್ಲಿ ವಿದೇಶಿ ಪ್ರಯಾಣಿಕರಿಗೆ ಪೂರ್ತಿ ಲಸಿಕೆ ಆಗಿದ್ದಲ್ಲಿ ಯಾವುದೇ ರೀತಿ ಶಿಷ್ಟಾಚಾರವಿಲ್ಲದೆ ಪ್ರಯಾಣಿಸಬಹುದು. ಇಲ್ಲಿನ ಸರ್ಕಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಹೇಳಿದ್ದು , ಸೆಪ್ಟೆಂಬರ್ 5ರಿಂದ ಅನ್ವಯವಾಗಿದೆ ಎಂದು ತಿಳಿಸಿದೆ.
ಸ್ವಿಜರ್ಲ್ಯಾಂಡ್:
ಕೋವಿಶಿಲ್ಡ್ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರು ಯಾವುದೇ ಕೋವಿಡ್ ಪರೀಕ್ಷೆಗೆ ಒಳಗಾಗದೆ ಇಲ್ಲಿಗೆ ಪ್ರಯಾಣಿಸಬಹುದು. ಇಲ್ಲಿಗೆ ನೇರ ವಿಮಾನ ಇಲ್ಲದ ಕಾರಣ ಪ್ಯಾರಿಸ್ ಮುಖಾಂತರ ಇಲ್ಲಿಗೆ ತಲುಪಬೇಕು.