ಕೋವಿಡ್-19 ಸೋಂಕಿನ ವಿರುದ್ಧದ ತನ್ನ ಸದ್ಯದ ಹೋರಾಟದಲ್ಲಿ ದೇಶವಾಸಿಗಳಿಗೆ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ನೀಡುವುದೇ ಮೊದಲ ಆದ್ಯತೆ ಆಗಿದೆ ಎಂದಿರುವ ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ನೀಡುವುದಲ್ಲ ಎಂದು ಸ್ಪಷ್ಟಪಡಿಸಿದೆ.
Corona Update: 1705 ಜನರಿಗೆ ಸೋಂಕು, 30 ಮಂದಿ ಸಾವು; ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ
ಲಸಿಕೆ ಮೇಲೆ ವಿಶ್ವಾಸಾರ್ಹತೆ ಬೆಳೆಸುವುದು, ಕೋವಿಡ್ ಸೋಂಕು ತಗುಲುವುದನ್ನು ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವುದು, ಸಂಚಾರ ಹಾಗೂ ಹಬ್ಬಗಳ ಆಚರಣೆ ವೇಳೆ ಜಾಗರೂಕತೆ ವಹಿಸುವುದು ಸದ್ಯದ ಮಟ್ಟಿಗೆ ಗಮನಿಸಬೇಕಾದ ವಿಚಾರಗಳಾಗಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಮಹಾ ನಿದೇರ್ಶಕ ಬಲರಾಂ ಭಾರ್ಗವ ತಿಳಿಸಿದ್ದಾರೆ.
“ಸದ್ಯದ ಮಟ್ಟಿಗೆ ವೈಜ್ಞಾನಿಕ ಹಾಗೂ ಸಾರ್ವಜನಿಕ ಆರೋಗ್ಯಸೇವೆ ಸಂಬಂಧಿ ಚರ್ಚೆಗಳಲ್ಲಿ ಬೂಸ್ಟರ್ ಡೋಸ್ಗಳು ಆದ್ಯತೆಯಾಗಿಲ್ಲ. ಎರಡೂ ಚುಚ್ಚುಮದ್ದುಗಳನ್ನು ಪಡೆದು ಲಸಿಕೆ ಪೂರ್ಣಗೊಳಿಸುವುದೇ ಆದ್ಯತೆ. ಹಬ್ಬಗಳು ಸನಿಹವಾಗುತ್ತಲೇ, ಜನದಟ್ಟಣೆ ಹೆಚ್ಚುವ ಕಾರಣದಿಂದಾಗಿ ವೈರಾಣುಗಳು ಹಬ್ಬಲು ಸೂಕ್ತವಾದ ವಾತಾವರಣ ನಿರ್ಮಾಣಗೊಳ್ಳುವ ಸಾಧ್ಯತೆ ಇರುತ್ತದೆ” ಎಂದು ಭಾರ್ಗವ್ ತಿಳಿಸಿದ್ದಾರೆ.
ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ನೀತಿ ಆಯೋಗದ ನಿರ್ದೇಶಕ ಡಾ. ವಿಕೆ ಪೌಲ್, “ಮುಂದಿನ 2-3 ತಿಂಗಳ ಅವಧಿಯಲ್ಲಿ ಕೋವಿಡ್ ವಿರುದ್ಧ ನಾವು ಇನ್ನಷ್ಟು ಜಾಗೃತರಾಗಿ ಹೆಜ್ಜೆ ಇಡಬೇಕಿದೆ” ಎಂದಿದ್ದಾರೆ.