alex Certify ಬಸ್ ನಲ್ಲಿ ಯುವತಿ ಪಕ್ಕದ ಸೀಟಲ್ಲೇ ಸಿನಿಮಾ ನೋಡ್ತಿದ್ದ ಯುವಕ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ನಲ್ಲಿ ಯುವತಿ ಪಕ್ಕದ ಸೀಟಲ್ಲೇ ಸಿನಿಮಾ ನೋಡ್ತಿದ್ದ ಯುವಕ ಮಾಡಿದ್ದೇನು ಗೊತ್ತಾ…?

ಬೆಂಗಳೂರು: ಬಸ್ ನಲ್ಲಿ ಪ್ರಯಾಣದ ವೇಳೆ ಸಿನಿಮಾ ನೋಡುತ್ತಿದ್ದ ಯುವಕ ಅದರಿಂದ ಪ್ರೇರಣೆಗೊಂಡು ಪಕ್ಕದಲ್ಲಿ ಕುಳಿತಿದ್ದ ಯುವತಿಗೆ ಚುಂಬಿಸಿದ ಘಟನೆ ನಡೆದಿದ್ದು, ಪೀಣ್ಯ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ.

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಯುವತಿ ಗಣಪತಿ ಹಬ್ಬಕ್ಕೆಂದು ಬಳ್ಳಾರಿಗೆ ಹೋಗಿದ್ದಾಳೆ. ಹಬ್ಬ ಮುಗಿದ ನಂತರ ಕೆಎಸ್ಸಾರ್ಟಿಸಿ ಸ್ಲೀಪರ್ ಬಸ್ ನಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಬಸ್ ನಲ್ಲಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವಕ ಸಿನಿಮಾ ನೋಡುತ್ತಾ ಅದರಿಂದ ಪ್ರೇರಣೆಗೊಂಡು ಯುವತಿಗೆ ಮುತ್ತಿಟ್ಟು ಬಸ್ ಇಳಿದು ಪರಾರಿಯಾಗಿದ್ದಾನೆ.

ಸೆಪ್ಟೆಂಬರ್ 13 ರಂದು ಬೆಳಗಿನ ಜಾವ 5 ಗಂಟೆಗೆ ಟಿ. ದಾಸರಹಳ್ಳಿ ಬಳಿ ಬಸ್ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಮುತ್ತು ಕೊಟ್ಟು ಯುವಕ ಬಸ್ ನಿಂದ ಇಳಿದು ಹೋಗಿದ್ದಾನೆ ಎನ್ನಲಾಗಿದೆ. ಘಟನೆಯಿಂದ ನೊಂದ ಯುವತಿ ಪೀಣ್ಯ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...