alex Certify ದೇಶದ ಅತಿ ಅಗಲದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಪೂರ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಅತಿ ಅಗಲದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಪೂರ್ಣ

150ಕ್ಕೂ ಅಧಿಕ ಇಂಜಿನಿಯರ್​ಗಳ ನೇತೃತ್ವದಲ್ಲಿ 1500ಕ್ಕೂ ಅಧಿಕ ಕಾರ್ಮಿಕರು ದೇಶದಲ್ಲೇ ಅತ್ಯಂತ ಅಗಲವಾದ ಹಾಗೂ ನಾಲ್ಕನೇ ಅತೀ ಉದ್ದದ ಸುರಂಗ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ಮಹಾರಾಷ್ಟ್ರದ ಮುಡಿಗೆ ಇನ್ನೊಂದು ಗರಿಯನ್ನು ಸೇರಿಸಿದ್ದಾರೆ. ನಾಸಿಕ್​ ಹೆದ್ದಾರಿಯ ಇಗತ್ಪುರಿ ಬಳಿ ಈ ಸುರಂಗ ನಿರ್ಮಾಣವಾಗಿದೆ.

8 ಕಿಲೋಮೀಟರ್​ ಉದ್ದದ ಈ ಅವಳಿ ಸುರಂಗಗಳು 17.5 ಮೀಟರ್​ ಅಗಲವಿದೆ . ಇದು 700ಕಿಲೋಮೀಟರ್​ ಅಂತರ ಹೊಂದಿರುವ ಮುಂಬೈ – ನಾಗ್ಪುರ ಮಾರ್ಗವನ್ನು ತ್ವರಿತಗತಿಯಲ್ಲಿ ತಲುಪಲು ಸಹಾಯ ಮಾಡುತ್ತದೆ.

ಈ ಹಿಂದೆ 14-15 ಗಂಟೆಗಟ್ಟಲೆ ಸಮಯ ತೆಗೆದುಕೊಳ್ತಿದ್ದ ಮುಂಬೈ – ನಾಗ್ಪುರ ನಡುವಿನ ಪ್ರಯಾಣವು ಈ ಸುರಂಗದ ಬಳಿಕ 8-9 ಗಂಟೆಗಳಲ್ಲಿಯೇ ಪೂರ್ಣಗೊಳ್ಳಲಿದೆ.

2745 ಕೋಟಿ ರೂಪಾಯಿ ವೆಚ್ಚದ ಈ ಅವಳಿ ಸುರಂಗ ಯೋಜನೆಯು ನಾಸಿಕ್​ ಜಿಲ್ಲೆಯ ತರಂಗಪಡ ಗ್ರಾಮ ಹಾಗೂ ಥಾಣೆಯ ವಶಲಾ ಗ್ರಾಮವನ್ನು ಸಂಪರ್ಕಿಸುತ್ತದೆ. ಈ ಮೂಲಕ ಕಾಸರ ಘಾಟ್​​ನ 30-35 ನಿಮಿಷಗಳ ಪ್ರಯಾಣ ಸಮಯವನ್ನು ಉಳಿಸಬಹುದಾಗಿದೆ.

ದೇಶದ ಇತಿಹಾಸದಲ್ಲಿಯೇ ಕೇವಲ 2 ವರ್ಷಗಳ ಅವಧಿಯಲ್ಲಿ ಅತ್ಯಂತ ಅಗಲವಾದ ಹಾಗೂ 8 ಕಿಲೋಮೀಟರ್​ ಉದ್ದದ ಸುರಂಗವು ನಿರ್ಮಾಣವಾಗಿಯೇ ಇರಲಿಲ್ಲ ಎಂದು ಎಂಎಸ್​ಆರ್​ಡಿಸಿ ಜಂಟಿ ಎಂಡಿ ಹಾಗೂ ಪಿಡಬ್ಲುಡಿ ಸೆಕ್ರೆಟರಿ ಅನಿಲ್​ ಕುಮಾರ್​ ಗಾಯಕವಾಡ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...