ಒಂದೇ ದಿನದಲ್ಲಿ 600 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಓಲಾ ಎಸ್ 1 ಸ್ಕೂಟರ್ಗಳನ್ನು ಮಾರಾಟ ಮಾಡಿರುವುದಾಗಿ ಓಲಾ ಎಲೆಕ್ಟ್ರಿಕ್ ಘೋಷಣೆ ಮಾಡಿದೆ.
ಈಗಾಗಲೇ ಸ್ಕೂಟರ್ಗಾಗಿ ಬುಕ್ಕಿಂಗ್ ಮಾಡಿದವರಿಗೆ ಕಂಪನಿಯು ಬುಧವಾರದಿಂದ ಮಾರಾಟ ಆರಂಭಿಸಿದೆ.
ಮೊದಲ 24 ಗಂಟೆಗಳ ಅವಧಿಯಲ್ಲಿ ಪ್ರತಿ ಸೆಕೆಂಡ್ಗೆ 4 ಸ್ಕೂಟರ್ಗಳನ್ನು ಮಾರಾಟ ಮಾಡಿರುವುದಾಗಿ ಓಲಾ ಎಲೆಕ್ಟ್ರಿಕ್ ಹೇಳಿಕೊಂಡಿದೆ. ಈ ಸಂಬಂಧ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿರುವ ಓಲಾ ಸಿಇಓ ಭವೀಶ್ ಅರ್ಗವಾಲ್, ಭಾರತವು ಪೆಟ್ರೋಲ್ನ್ನು ತಿರಸ್ಕರಿಸಿದೆ ಹಾಗೂ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದೆ. ಪ್ರತಿ ಸೆಕೆಂಡ್ಗೆ 4 ಸ್ಕೂಟರ್ಗಳನ್ನು ಮಾರಾಟ ಮಾಡುವ ಮೂಲಕ ನಾವು ಒಂದು ದಿನದಲ್ಲಿ 600 ಕೋಟಿಗೂ ಅಧಿಕ ಹಣ ಸಂಪಾದಿಸಿದ್ದೇವೆ. ಇಂದು ಕೊನೆಯ ದಿನವಾಗಿದ್ದು ಮಧ್ಯರಾತ್ರಿಗೆ ಖರೀದಿ ಪ್ರಕ್ರಿಯೆ ಅಂತ್ಯಗೊಳ್ಳಲಿದೆ ಎಂದು ಟ್ವೀಟಾಯಿಸಿದ್ದಾರೆ.
ಗ್ರಾಹಕರಿಗೆ ತಮ್ಮ ಓಲಾ ಎಸ್1 ಹಾಗೂ ಎಸ್ 1ಪ್ರೋ ಸ್ಕೂಟರ್ ಖರೀದಿ ಮಾಡಲು ಇಂದು ಕೊನೆಯ ದಿನವಾಗಿದೆ. ಓಲಾ ಅಪ್ಲಿಕೇಶನ್ನಲ್ಲಿ ಮಾತ್ರ ಖರೀದಿ ಲಭ್ಯವಿದೆ. ಓಲಾ ಎಸ್ 1 ಸ್ಕೂಟರ್ಗೆ 2999 ರೂಪಾಯಿಗೆ ಇಎಂಐ ಆರಂಭವಾಗಲಿದೆ. ಓಲಾ ಎಸ್ 1 ಪ್ರೋಗೆ ಇಎಂಐ 3199 ರೂಪಾಯಿಯಿಂದ ಆರಂಭವಾಗಲಿದೆ.