alex Certify ಸಂಸ್ಕರಣಾ ಶುಲ್ಕವಿಲ್ಲದೆ ಶೇ.6.70ರ ದರದಲ್ಲಿ ಈ ಬ್ಯಾಂಕ್ ನೀಡ್ತಿದೆ ಗೃಹ ಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸ್ಕರಣಾ ಶುಲ್ಕವಿಲ್ಲದೆ ಶೇ.6.70ರ ದರದಲ್ಲಿ ಈ ಬ್ಯಾಂಕ್ ನೀಡ್ತಿದೆ ಗೃಹ ಸಾಲ

ಹಬ್ಬದ ಋತುವಿನಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೃಹ ಸಾಲದ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಹಬ್ಬದ ಸಮಯದಲ್ಲಿ ಮನೆ ಖರೀದಿದಾರರಿಗೆ ಸುಲಭ ಸಾಲ ನೀಡಲು ಎಸ್‌ಬಿಐ ಕ್ರೆಡಿಟ್ ಸ್ಕೋರ್ ಲಿಂಕ್ಡ್ ಹೋಮ್ ಲೋನ್‌ ಸೌಲಭ್ಯ ನೀಡಲಿದೆ. ಗ್ರಾಹಕರು ಕೇವಲ ಶೇಕಡಾ 6.70 ರ ಆರಂಭಿಕ ಬಡ್ಡಿದರದಲ್ಲಿ ಗೃಹ ಸಾಲವನ್ನು ಪಡೆಯಲಿದ್ದಾರೆ. ಸಾಲದ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ.

ಇದೇ ವೇಳೆ ಎಸ್ಬಿಐ ಗೃಹ ಸಾಲಗಳಿಗೆ ಸಂಸ್ಕರಣಾ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಅಗ್ಗದಲ್ಲಿ ಗೃಹ ಸಾಲ ಸಿಗಲಿದೆ. ಎಸ್‌ಬಿಐ ಮಾಹಿತಿ ಪ್ರಕಾರ, ಗೃಹ ಸಾಲದ ಬ್ಯಾಲೆನ್ಸ್ ವರ್ಗಾವಣೆ ಮಾಡುವ ಗ್ರಾಹಕರಿಗೆ ಅದೇ ಬಡ್ಡಿ ದರಗಳು ಅನ್ವಯವಾಗುತ್ತವೆ.

ಎಸ್‌ಬಿಐ ಪ್ರಕಾರ, ಈ ಹಿಂದೆ 75 ಲಕ್ಷ ರೂಪಾಯಿಗಿಂತ ಹೆಚ್ಚಿನ ಗೃಹ ಸಾಲದ ಬಡ್ಡಿ ದರಗಳು ಶೇಕಡಾ 7.15 ರಿಂದ ಆರಂಭವಾಗಿದ್ದವು. ಈಗ ಹಬ್ಬದ ಕೊಡುಗೆಯಾಗಿ, ಗ್ರಾಹಕರು ಯಾವುದೇ ಗೃಹ ಸಾಲದ ಮೊತ್ತವನ್ನು ವಾರ್ಷಿಕ ಕನಿಷ್ಠ ಶೇಕಡಾ 6.70ರ ಬಡ್ಡಿಯಲ್ಲಿ ತೆಗೆದುಕೊಳ್ಳಬಹುದು. 75 ಲಕ್ಷಕ್ಕಿಂತ ಹೆಚ್ಚಿನ ಗೃಹ ಸಾಲ ಪಡೆದ ಗ್ರಾಹಕರು 45 ಬೇಸಿಸ್ ಪಾಯಿಂಟ್‌ಗಳ ಉಳಿತಾಯವನ್ನು ಪಡೆಯಲಿದ್ದಾರೆ.ಮೊತ್ತದಲ್ಲಿ ನೋಡುವುದಾದ್ರೆ 30 ವರ್ಷಕ್ಕೆ, 75 ಲಕ್ಷ ರೂಪಾಯಿ ಸಾಲಕ್ಕೆ ಒಟ್ಟೂ 8 ಲಕ್ಷದವರೆಗೆ ಬಡ್ಡಿ ಉಳಿಯಲಿದೆ.

ಎಸ್ಬಿಐ ಗೃಹ ಸಾಲ ಗ್ರಾಹಕರಿಗೆ ಮತ್ತೊಂದು ನೆಮ್ಮದಿ ಸುದ್ದಿ ನೀಡಿದೆ. ಬ್ಯಾಂಕ್ ಈಗ ಸಂಬಳ ಮತ್ತು ಸಂಬಳವಲ್ಲದವರ ಬಡ್ಡಿದರಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಿದೆ. ಈ ಹಿಂದೆ, ಸಂಬಳ ಪಡೆಯದ ಗೃಹ ಸಾಲದ ಗ್ರಾಹಕರು 15 ಬೇಸಿಸ್ ಪಾಯಿಂಟ್‌ಗಳನ್ನು ಅಂದರೆ ಶೇಕಡಾ 0.15ರಷ್ಟು ಬಡ್ಡಿಯನ್ನು ಪಾವತಿಸಬೇಕಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...