ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್, ಮಹತ್ವದ ತೀರ್ಪು ನೀಡಿದೆ. ಕೇವಲ ಹಾರ ಬದಲಿಸಿದ್ರೆ ಮದುವೆಯಾಗುವುದಿಲ್ಲವೆಂದು ಕೋರ್ಟ್ ಹೇಳಿದೆ.
ಮಾಲೆ ಬದಲಿಸುವ ಜೊತೆ ಶಾಸ್ತ್ರಬದ್ಧವಾಗಿ ಸಪ್ತಪದಿ ತುಳಿಯಬೇಕೆಂದು ಕೋರ್ಟ್ ಹೇಳಿದೆ. ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗುವುದಾಗಿ ಹೇಳಿಕೊಳ್ಳುತ್ತಿದ್ದ ಮೊರೆನಾ ದಂಪತಿ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಈ ಹೇಳಿಕೆಯನ್ನು ನೀಡಿದೆ.
ಮದುವೆಯಾದ ನಂತರ ದಂಪತಿ ಹೈಕೋರ್ಟ್ನಿಂದ ರಕ್ಷಣೆ ಕೋರಿದ್ದರು. ವಿಚಾರಣೆಯ ಸಮಯದಲ್ಲಿ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮದುವೆಯಾದ ಬಗ್ಗೆ ಒಂದೇ ಒಂದು ಸಾಕ್ಷಿ ನೀಡಲಾಗಿಲ್ಲ.
ಮೊರೆನಾ ನಿವಾಸಿಯಾದ 23 ವರ್ಷದ ಹುಡುಗ 21 ವರ್ಷದ ಯುವತಿಯೊಂದಿಗೆ ಆಗಸ್ಟ್ 16 ರಂದು ಗ್ವಾಲಿಯರ್ನ ಲೋಹಾ ಮಂಡಿ ಕೋಟೆಯಲ್ಲಿರುವ ಆರ್ಯ ಸಮಾಜ ಮಂದಿರದಲ್ಲಿ ಪ್ರೇಮ ವಿವಾಹವಾಗಿದ್ದರು. ಆರ್ಯ ಸಮಾಜ, ವಿವಾಹಕ್ಕೆ ಪ್ರಮಾಣಪತ್ರ ನೀಡಿದೆ. ಇದರ ನಂತರ, ಇಬ್ಬರೂ ತಮ್ಮ ಭದ್ರತೆಗೆ ಸಂಬಂಧಿಸಿದಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಎರಡೂ ಕುಟುಂಬಗಳು ನಮ್ಮ ಮೇಲೆ ಸುಳ್ಳು ಆರೋಪ ಮಾಡ್ತಿವೆ. ಯಾವುದೇ ಕ್ರಮಕೈಗೊಳ್ಳಬಾರದು. ವೈವಾಹಿಕ ಸಂಬಂಧಗಳನ್ನು ಬಲಪಡಿಸಲು, ನಮಗೆ ರಕ್ಷಣೆ ನೀಡಬೇಕೆಂದು ದಂಪತಿ ಕೋರಿದ್ದಾರೆ.
ಸರ್ಕಾರಿ ವಕೀಲ ದೀಪಕ್ ಖೋಟ್ ಈ ಅರ್ಜಿ ನಿರಾಕರಿಸುವಂತೆ ಕೋರಿದ್ದರು. ಅರ್ಜಿದಾರರು ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ. ಅವರಿಗೆ ಯಾರು ಬೆದರಿಕೆ ಹಾಕುತ್ತಾರೆ ? ಹಾಕುತ್ತಿದ್ದಾರೆ ಎಂಬ ಬಗ್ಗೆಯೂ ಯಾವುದೇ ಉಲ್ಲೇಖವಿಲ್ಲವೆಂದು ಸರ್ಕಾರಿ ವಕೀಲರು ಹೇಳಿದ್ದಾರೆ.