
ಉದ್ಯೋಗಸ್ಥರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡುವ ಸಾಧ್ಯತೆಯಿದೆ. ಮೋದಿ ಸರ್ಕಾರ ಅಕ್ಟೋಬರ್ 1 ರಿಂದ ಕಾರ್ಮಿಕ ಸಂಹಿತೆಯ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ. ಕಾರ್ಮಿಕ ಸಂಹಿತೆಯ ನಿಯಮಗಳ ಪ್ರಕಾರ, ಉದ್ಯೋಗಿಗಳು ವಾರದಲ್ಲಿ 3 ದಿನಗಳವರೆಗೆ ರಜೆಯ ಆಯ್ಕೆಯನ್ನು ಪಡೆಯಲಿದ್ದಾರೆ.
ವಾರದಲ್ಲಿ ಐದು ಅಥವಾ ಆರು ದಿನಗಳ ಬದಲಾಗಿ, ಕೇವಲ 4 ದಿನ ಕೆಲಸ ಮಾಡಬಹುದು. ಕೆಲಸದ ಸಮಯವನ್ನು ದಿನಕ್ಕೆ 9 ರಿಂದ 12 ಗಂಟೆಗಳವರೆಗೆ ಹೆಚ್ಚಿಸುವ ಸಾಧ್ಯತೆಯಿದೆ.
ಹೊಸ ಕರಡು ಕಾನೂನಿನಲ್ಲಿ, ಗರಿಷ್ಠ ಕೆಲಸದ ಸಮಯವನ್ನು 12 ಗಂಟೆಗೆ ಹೆಚ್ಚಿಸುವ ಪ್ರಸ್ತಾಪಿಸಲಾಗಿದೆ. ಕಾರ್ಮಿಕ ಸಂಘಗಳು 12-ಗಂಟೆಗಳ ಕೆಲಸವನ್ನು ವಿರೋಧಿಸುತ್ತಿವೆ. ಸಂಹಿತೆಯ ಕರಡು ನಿಯಮಗಳಲ್ಲಿ, 30 ನಿಮಿಷಕ್ಕಿಂತ ಕಡಿಮೆ ಅವಧಿ ಕೆಲಸವನ್ನೂ ಹೆಚ್ಚುವರಿ ಕೆಲಸವಾಗಿ ಪರಿಗಣಿಸಲಾಗುತ್ತದೆ. 15 ರಿಂದ 30 ನಿಮಿಷ ಹೆಚ್ಚುವರಿ ಕೆಲಸ ಮಾಡಿದ್ರೆ ಅದನ್ನು ಹೆಚ್ಚುವರಿ ಕೆಲಸವೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ನಿಯಮದ ಪ್ರಕಾರ, 30 ನಿಮಿಷಗಳಿಗಿಂತ ಕಡಿಮೆ ಅವಧಿಯನ್ನು ಅರ್ಹ ಅಧಿಕಾವಧಿ ಎಂದು ಪರಿಗಣಿಸಲಾಗುವುದಿಲ್ಲ.
ಕರಡು ನಿಯಮಗಳು, ಯಾವುದೇ ಉದ್ಯೋಗಿಯು 5 ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ಕೆಲಸ ಮಾಡುವುದನ್ನು ನಿಷೇಧಿಸುತ್ತದೆ. ಉದ್ಯೋಗಿಗಳಿಗೆ ಪ್ರತಿ ಐದು ಗಂಟೆಗಳ ನಂತರ ಅರ್ಧ ಗಂಟೆ ವಿಶ್ರಾಂತಿ ನೀಡಬೇಕು. ಹೊಸ ಕಾರ್ಮಿಕ ಸಂಹಿತೆಯಲ್ಲಿ, ಈ ನಿಯಮಗಳಲ್ಲಿ ಇರಿಸಲಾಗುವುದು. ಇದನ್ನು ಆಯ್ದುಕೊಳ್ಳುವ ಆಯ್ಕೆ ಕಂಪನಿ ಮತ್ತು ಉದ್ಯೋಗಿಗಳಿಗೆ ಬಿಟ್ಟಿದ್ದು.