ಬೆಂಗಳೂರು: ಕಂದಾಯ ನಿವೇಶನಗಳ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಹೊರಡಿಸಿದ್ದ ಸುತ್ತೋಲೆಯ ಅನ್ವಯ ದಾಖಲೆ ಸಲ್ಲಿಸಿದವರಿಗೆ ಸೈಟ್ ನೋಂದಣಿ ಮಾಡಿ ಕೊಡಲಾಗುವುದು.
ವಿಧಾನಪರಿಷತ್ ನಲ್ಲಿ ಈ ಬಗ್ಗೆ ಭರವಸೆ ನೀಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಕಂದಾಯ ನಿವೇಶನಗಳ ನೋಂದಣಿಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಹೊರಡಿಸಿದ ಸುತ್ತೋಲೆ ಪ್ರಕಾರ, ಅಗತ್ಯವಿರುವ ದಾಖಲೆಗಳನ್ನು ಹಾಜರುಪಡಿಸಿದರೆ ಅಂತಹ ನಿವೇಶನಗಳ ನೋಂದಣಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಕ್ಷಮ ಪ್ರಾಧಿಕಾರಿಯಿಂದ ಅನುಮೋದನೆ ಪಡೆಯದೆ ಕೃಷಿಭೂಮಿಯಲ್ಲಿ ಬಡಾವಣೆ ನಿರ್ಮಿಸಲಾಗಿದೆ. ಇಂತಹ ಅನಧಿಕೃತ ನಿವೇಶನಗಳ ನೋಂದಣಿ ಸಾಧ್ಯವಾಗುತ್ತಿಲ್ಲ. ಕಂದಾಯ ನಿವೇಶನಗಳ ನೋಂದಣಿಯಾಗದೇ ಸಮಸ್ಯೆಯಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಸರ್ಕಾರ ಕ್ರಮಕೈಗೊಂಡಿದ್ದು, ಅಗತ್ಯವಿರುವ ದಾಖಲೆ ನೀಡಿದಲ್ಲಿ ನೋಂದಣಿ ಮಾಡಲಾಗುವುದು ಎಂದು ಹೇಳಲಾಗಿದೆ.